“ಬೇಟಿ ಬಚಾವೋ“ ಮೋದಿಯವರ ಪ್ರಚಾರಕ್ಕೆ ಇರುವ ಘೋಷಣೆಯೇ ಹೊರತು ನೈಜ ಕಾಳಜಿಯಲ್ಲ: ಕಾಂಗ್ರೆಸ್
ಬೆಂಗಳೂರು: ದೇಶದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 13ಲಕ್ಷಕ್ಕಿಂತಲೂ ಮಿಕ್ಕ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಸಂಸತ್ತಿಗೆ ಕೇಂದ್ರ ಸರ್ಕಾರದ ಸಲ್ಲಿಸಿರುವ ವರದಿಯ ಬಗ್ಗೆ ಕಾಂಗ್ರೆಸ್ ಕಿಡಿಕಾರಿದೆ.
ಕರ್ನಾಟಕದಿಂದಲೇ 703 ಬಾಲಕಿಯರ ಸಹಿತ ಒಟ್ಟು ನಲ್ವತ್ತುಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, “ಬೇಟಿ ಬಚಾವೋ“ ಎನ್ನುವುದು ಮೋದಿಯವರ ಪ್ರಚಾರಕ್ಕೆ ಇರುವ ಘೋಷಣೆಯೇ ಹೊರತು ನೈಜ ಕಾಳಜಿಯಲ್ಲ. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿಯ ಡಬಲ್ ಇಂಜಿನ್ ಆಡಳಿತದ ಕರ್ನಾಟಕದಲ್ಲಿ 40,000 ಕ್ಕೂ ಹೆಚ್ಚು ಮಹಿಳೆಯರು ಹಾಗೂ ದೇಶದಲ್ಲಿ 13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ. ಮಹಿಳೆಯರ ನಾಪತ್ತೆ ಪ್ರಕರಣಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲೇ ಹೆಚ್ಚು. ಬಿಜೆಪಿಯ ಅಚ್ಚೆ ದಿನಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಿರುವುದು ಪ್ರಮುಖ ವೈಫಲ್ಯ ಎಂದು ವಾಗ್ದಾಳಿ ನಡೆಸಿದೆ.
Next Story