ದಮ್ಮು-ತಾಕತ್ತು ಎಂದರೆ ಪ್ರತಿಕ್ರಿಯೆ ನೀಡುವುದಿಲ್ಲ : ಶೋಭಾ ಕರಂದ್ಲಾಜೆಗೆ ಭೈರತಿ ಸುರೇಶ್ ತಿರುಗೇಟು
ಭೈರತಿ ಸುರೇಶ್/ಶೋಭಾ ಕರಂದ್ಲಾಜೆ
ಬೆಂಗಳೂರು: ಸುಸಂಸ್ಕೃತ ಹೆಣ್ಣುಮಕ್ಕಳು ಪ್ರಶ್ನೆ ಕೇಳಿದರೆ ಉತ್ತರ ನೀಡುತ್ತೇನೆ. ಆದರೆ, ದಮ್ಮು- ತಾಕತ್ತು ಎಂದು ಮಾತನಾಡುವವರ ಪ್ರಶ್ನೆಗಳಿಗೆ ಯಾವುದೇ ಕಾರಣಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಇಂದಿಲ್ಲಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ತಿರುಗೇಟು ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದಿದ್ದರೂ ಹೆಣ್ಣು ಮಕ್ಕಳು ತಾಕತ್ತು-ಧಮ್ಮು ಎಂದು ಮಾತನಾಡಿದವರನ್ನು ನಾನು ಎಲ್ಲಿಯೂ ನೋಡಿಲ್ಲ. ಹೆಣ್ಣು ಮಕ್ಕಳೆಂದರೆ ಕ್ಷಮಯಾ ಧರಿತ್ರಿ, ಭಾರತಾಂಬೆ ಎಂದೆಲ್ಲಾ ಪೂಜಿಸುತ್ತೇವೆ, ಗೌರವಿಸುತ್ತೇವೆ ಎಂದು ನುಡಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಈ ಮೊದಲೇ ಹೇಳಿದ್ದೇನೆ. ಅದನ್ನು ಪಾಲಿಸುತ್ತೆನೆ. ಸೂಕ್ತ ಸಮಯದಲ್ಲಿ ದಾಖಲೆಯನ್ನು ಹೊರಹಾಕುತ್ತೇನೆ ಎಂದು ಅವರು ಪ್ರತಿಕ್ರಿಯೆ ನೀಡಿದರು.
Next Story