ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ಹೆಸರು ಮುಚ್ಚಿ ಹಾಕಲು ಬಿಜಿಪಿಯಿಂದ ಮುಡಾ ಹಗರಣ ಆರೋಪ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ವಾಲ್ಮೀಕಿ, ಮುಡಾ ಹಗರಣಗಳ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವವರು ಈ ಬಗ್ಗೆ ಏಕೆ ಮೌನ. ಅಲ್ಲದೆ, ಯಡಿಯೂರಪ್ಪ ಅವರ ಮೇಲಿರುವ ಪೋಕ್ಸೋ ಪ್ರಕರಣ ಮುಚ್ಚಿಹಾಕಲು ಬಿಜೆಪಿ ಮುಡಾ ಮತ್ತು ವಾಲ್ಮೀಕಿ ಹಗರಣ ವಿಚಾರ ತೆಗೆದಿದ್ದಾರೆ ಅಷ್ಟೇ ಎಂದು ಟೀಕಿಸಿದರು.
ಬಿಜೆಪಿಯವರಿಗೆ ಬಹಳ ಆತಂಕ ಇದೆ. ಹೀಗಾಗಿ, ಐಟಿ, ಈಡಿ, ಸಿಬಿಐ ಕರೆಸುವುದು ಮಾಡುತ್ತಿದ್ದಾರೆ. ಅವರ ಸರಕಾರದಲ್ಲಿ ಆದ ಹಗರಣಕ್ಕೆ ಒಂದಕ್ಕೂ ಅವರು ಈಡಿ ಕರೆಸಿಲ್ಲ ಎಂದ ಅವರು, ಮಾಜಿ ಸಚಿವ ನಾಗೇಂದ್ರ ಅವರು ಇದರಲ್ಲಿ ನನ್ನ ಕೈವಾಡವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಐಟಿ, ಈಡಿ ಕೇಂದ್ರ ಸರಕಾರದ ಕೈಗೊಂಬೆ ಎಂದು ಹೇಳಿದರು.
Next Story