ಕಾಂಗ್ರೆಸ್ ಸರಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನ: ಕೆ.ಸಿ. ವೇಣುಗೋಪಾಲ್ ಆರೋಪ
ಕೆ.ಸಿ. ವೇಣುಗೋಪಾಲ್ (PTI)
ಬೆಂಗಳೂರು, ಅ. 29: ‘ಕರ್ನಾಟಕ ರಾಜ್ಯದಲ್ಲಿ ಬಿಜೆಪಿಗೆ ಹೊಸ ಸಾರಥಿ ಹುಡುಕಿಕೊಳ್ಳಲು ಸಾಧ್ಯವಾಗಿಲ್ಲ. ಪ್ರತಿಪಕ್ಷ ನಾಯಕನನ್ನು ಹುಡುಕಿಕೊಳ್ಳಲು ಸಾಧ್ಯವಾಗಿಲ್ಲ. ಆದರೂ ಬಿಜೆಪಿಯು ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.
ರವಿವಾರ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಪ್ರತಿಪಕ್ಷ್ಷ ನಾಯಕ ಅಥವಾ ಅಜೆಂಡಾ ಇಲ್ಲದ ಪಕ್ಷವು (ಬಿಜೆಪಿ) ಜನಾದೇಶವನ್ನು ರದ್ದುಗೊಳಿಸುವ ಹಳೆಯ ಅಭ್ಯಾಸವನ್ನು ಈಗ ಆಶ್ರಯಿಸುತ್ತಿದೆ. ದಿಲ್ಲಿಯಲ್ಲಿರುವ ತಮ್ಮ ನಾಯಕರ ನಿರ್ದೇಶನದ ಮೇರೆಗೆ ಕರ್ನಾಟಕ ಬಿಜೆಪಿಯು ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವ ಮತ್ತೊಂದು ನಗೆಪಾಟಲಿನ ಪ್ರಯತ್ನ ಮಾಡುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.
‘ಆದರೆ, ನಮ್ಮ ಕಾಂಗ್ರೆಸ್ ಶಾಸಕರು ನಿμÁ್ಠವಂತರಾಗಿದ್ದು, ಈ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಅನುμÁ್ಠನವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಬಹುಶಃ ಅವರು ಮೊದಲು ವಿರೋಧ ಪಕ್ಷದ ನಾಯಕ ಮತ್ತು ಪಕ್ಷದ ರಾಜ್ಯಾಧ್ಯಕ್ಷರನ್ನು ಹುಡುಕಬೇಕು ಅಲ್ಲವೇ?' ಎಂದು ವೇಣುಗೋಪಾಲ್ ವಾಗ್ದಾಳಿ ನಡೆಸಿದ್ದಾರೆ.