ಬಿಜೆಪಿಯ ʼXʼ ಖಾತೆ ಟ್ರೋಲ್ ಪೇಜ್ನಂತೆ ವರ್ತಿಸುತ್ತಿದೆ: ಕಾಂಗ್ರೆಸ್
ಬೆಂಗಳೂರು: ಒಂದು ರಾಜಕೀಯ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಗೆ ಇರಬೇಕಾದ ಘನತೆ, ಸಭ್ಯ ಭಾಷೆ, ನೈತಿಕತೆ ಯಾವುದೂ ಇಲ್ಲದೆ ರಾಜ್ಯ ಬಿಜೆಪಿಯ ಸಾಮಾಜಿಕ ಜಾಲತಾಣ (X ಖಾತೆ) ಟ್ರೋಲ್ ಪೇಜ್ನಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸಾಮಾಜಿಕ ಜಾಲತಾಣ X ನಲ್ಲಿ ವ್ಯಂಗ್ಯಾತ್ಮಕ ಪೋಸ್ಟ್ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸುಳ್ಳು ಹೇಳುವುದಕ್ಕೆ ಪ್ರಿಯಾಂಕ್ ಖರ್ಗೆ ಅವರು ಮೋದಿಯವರ ಗರಡಿಯಲ್ಲಿ ಪಳಗಿಲ್ಲ ಎಂದು ತಿರುಗೇಟು ನೀಡಿದೆ.
ಪ್ರಿಯಾಂಕ್ ಖರ್ಗೆಯವರು ಗಂಗಾಕಲ್ಯಾಣ ಹಗರಣದ ಬಗ್ಗೆ ಮಾತಾಡಿದಾಗ ಸುಳ್ಳು ಎಂದಿರಿ. ನಂತರ ಸತ್ಯ ಹೊರಬಂತು. ಪಿಎಸ್ಐ ಹಗರಣವನ್ನು ಬಯಲಿಗೆಳೆದಾಗ ಸುಳ್ಳು ಎಂದಿರಿ. ಸತ್ಯ ಜಗತ್ತಿಗೆ ತಿಳಿಯಿತು. ಬಿಟ್ ಕಾಯಿನ್ ಹಗರಣ ತೆರೆದಿಟ್ಟಾಗ ಸುಳ್ಳು ಎಂದಿರಿ. ಸತ್ಯ ಜಗಜ್ಜಾಹೀರಾಯ್ತು. ಸುಳ್ಳು ಬಿಜೆಪಿಯವರ ಮನೆದೇವರೇ ಹೊರತು ನಮಗಲ್ಲ ಎಂದು ಕುಟುಕಿದೆ.
Next Story