ಸಿ ಟಿ ರವಿ ಬಂಧನ ಪ್ರಕರಣ: ಖಾನಾಪುರ ಸಿಪಿಐ ಅಮಾನತು
ಬಿಜೆಪಿ ನಾಯಕರನ್ನು ಠಾಣೆಯ ಒಳಗಡೆ ಬರಲು ಅನುಮತಿ ನೀಡಿದ ಆರೋಪ
ಬೆಳಗಾವಿ: ಬಿಜೆಪಿ ಪಕ್ಷದ ಎಂಎಲ್ಸಿ ಸಿ.ಟಿ.ರವಿ ಅವರ ಬಂಧನ ಪ್ರಕರಣ ಹಾಗೂ ಆ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಖಾನಾಪುರ ಠಾಣೆಯ ಸಿಪಿಐ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಸಿಪಿಐ ಮಂಜುನಾಥ್ ನಾಯಕ್ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ. ಸಿ. ಟಿ.ರವಿ ಪರ ಬಿಜೆಪಿ ನಾಯಕರನ್ನು ಠಾಣೆಯ ಒಳಗಡೆ ಬರಲು ಅನುಮತಿ ನೀಡಿದ ಆರೋಪದ ಮೇಲೆ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ವಿಕಾಸ್, ಸಿಪಿಐ ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಿ.ಟಿ.ರವಿ ಅವರನ್ನು ಹಿರೇಬಾಗೆವಾಡಿ ಠಾಣೆಯಿಂದ ಖಾನಾಪುರ ಠಾಣೆಗೆ ಕರೆ ತಂದಾಗ ಹಲವು ರಾಜಕೀಯ ನಾಯಕರು ಇನ್ಸಪೆಕ್ಟರ್ ಕೊಠಡಿವರೆಗೆ ಪ್ರವೇಶಿಸಿ ಕುಳಿತು ಚರ್ಚೆ ನಡೆಸಿದ್ದರು.
Next Story