KEA ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಪ್ರಕರಣ: ದೈಹಿಕ ಶಿಕ್ಷಕ ವಶಕ್ಕೆ
ಸಂತೋಷ್ ಗುತ್ತೇದಾರ್
ಕಲಬುರಗಿ: ಕೆಇಎ ಪರೀಕ್ಷೆಯಲ್ಲಿ ಬ್ಲೂಟುತ್ ಬಳಸಿದ ಅಭ್ಯರ್ಥಿಗಳಿಗೆ ಉತ್ತರ ನೀಡಲು ಸಹಾಯ ಮಾಡಿರುವ ಆರೋಪದಲ್ಲಿ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ಓರ್ವನನ್ನು ಅಶೋಕ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಂತೋಷ್ ಗುತ್ತೇದಾರ್ ಬಂಧಿತ ಶಿಕ್ಷಕ ಎಂದು ತಿಳಿದು ಬಂದಿದೆ.
ಸಂತೋಷ್, ಅರ್.ಡಿ ಪಾಟೀಲ್ ಅಪ್ತನಾಗಿದ್ದಾನೆ ಎನ್ನಲಾಗುತ್ತಿದೆ. ಈತ ಅಫಝಲಪುರ ಪರೀಕ್ಷಾ ಕೇಂದ್ರದಲ್ಲಿ ನೇಮಕ ಮಾಡಿಕೊಂಡು ಆಕ್ರಮ ಉತ್ತರ ನೀಡಲು ಸಹಾಯ ಮಾಡಿರುವುದಾಗಿ ತಿಳಿದುಬಂದಿದೆ.
ಸದ್ಯ ಸಂತೋಷ್ ಗುತ್ತೇದಾರ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶುಕ್ರವಾರ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ನನ್ನು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ಶನಿವಾರ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
Next Story