ಕೇಂದ್ರ ಸರ್ಕಾರ ಬಡವರ ಅನ್ನ ಕಸಿದು ಕ್ರೌರ್ಯ ತೋರಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ಕೇಂದ್ರ ಸರ್ಕಾರ ಅಕ್ಕಿ ರಾಜಕೀಯ ಮಾಡಿ ಬಡವರ ಅನ್ನ ಕಸಿದು ಕ್ರೌರ್ಯ ತೋರಿಸಿದೆ. ಕೇಂದ್ರ ಅಕ್ಕಿ ಕೊಡದಿದ್ದರೂ ನಾವು ಬಡವರನ್ನು ಉಪವಾಸವಿರಲು ಬಿಡುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇ-ಹರಾಜು ಮೂಲಕ ಕೇಂದ್ರ ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡುತ್ತಿದೆ. ನಾವು ಕೊಡಲು ಒಪ್ಪಿದ ಮೊತ್ತಕ್ಕಿಂತ ಕಡಿಮೆ ಮೊತ್ತದಲ್ಲಿ ಅಕ್ಕಿ ಮಾರಾಟ ಮಾಡಲು ಹರಾಜು ಕರೆದಿದ್ದರೂ ಅಕ್ಕಿಯನ್ನು ಕೇಳುವವರೇ ಗತಿಯಿಲ್ಲ. ಇದರ ಬದಲು ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡಬಹುದಿತ್ತು. ಕನಿಷ್ಟ ಪಕ್ಷ ಇದರಿಂದ ರಾಜ್ಯದ ಬಡವರ ಹೊಟ್ಟೆಯಾದರೂ ತುಂಬುತಿತ್ತು.
ನಾವು ಕೇಂದ್ರಕ್ಕೆ ಒಂದು kg ಅಕ್ಕಿಗೆ 34 ರೂ ಕೊಡಲು ಒಪ್ಪಿದ್ದೆವು. ಆದರೆ ನಮಗೆ ಅಕ್ಕಿ ನಿರಾಕರಿಸಿದ ಕೇಂದ್ರ ಸರ್ಕಾರ FCI ಮೂಲಕ kgಗೆ 31.75 ರೂ ಬೆಲೆ ನಿಗದಿ ಪಡಿಸಿ ಖಾಸಗಿಯವರಿಗೆ ಮಾರಲು ಇ- ಹರಾಜು ಕರೆದಿದೆ. ಇದು ರಾಜ್ಯBJP ನಾಯಕರ ದೃಷ್ಟಿಯಲ್ಲಿ ದ್ರೋಹ ಎನಿಸುವುದಿಲ್ಲವೇ? ಈ ಬಗ್ಗೆ ಮಾತಾಡಲು ರಾಜ್ಯ BJP ನಾಯಕರಿಗೆ ಧಮ್ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಅಕ್ಕಿ ರಾಜಕೀಯ ಮಾಡಿ ಬಡವರ ಅನ್ನ ಕಸಿದು ಕ್ರೌರ್ಯ ತೋರಿಸಿದೆ. ಕೇಂದ್ರ ಅಕ್ಕಿ ಕೊಡದಿದ್ದರೂ ನಾವು ಬಡವರನ್ನು ಉಪವಾಸವಿರಲು ಬಿಡುವುದಿಲ್ಲ. ಈಗಾಗಲೇ ಅಕ್ಕಿಯ ಬದಲು ಹಣ ನೀಡುತ್ತಿದ್ದೇವೆ. ಹೊಟ್ಟೆ ತುಂಬಿದ ಗಿರಾಕಿಗಳಾದ BJPಯವರಿಗೆ ಹಸಿವಿನ ಸಂಕಟ ಗೊತ್ತಿಲ್ಲ. ಇನ್ನಾದರೂ BJP ನಾಯಕರು ರಾಜಕೀಯ ಬಿಟ್ಟು ಕೇಂದ್ರದಿಂದ ಅಕ್ಕಿ ಕೊಡಿಸಲಿ ಎಂದಿದ್ದಾರೆ.