ಕೇಂದ್ರದ ಸರ್ವಾಧಿಕಾರಿ ಮನೋಭಾವದಿಂದ ಸಂವಿಧಾನಕ್ಕೆ ಅಪಾಯ: ದಿನೇಶ್ ಗುಂಡೂರಾವ್
ಬೆಂಗಳೂರು: ನಗರದಲ್ಲಿ ಇಂದು ನಡೆಯುತ್ತಿರುವ ದೇಶದ ಪ್ರಮುಖ ವಿರೋಧ ಪಕ್ಷಗಳ ಸಭೆ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಅತೀ ಅಗತ್ಯ ಮತ್ತು ಅನಿವಾರ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಫ್ಯಾಸಿಸ್ಟ್ ಧೋರಣೆಯಿಂದ ಸರ್ವಾಧಿಕಾರಿ ಮನೋಭಾವ ಪ್ರದರ್ಶಿಸುತ್ತಿರುವ ಕೇಂದ್ರ ಸಂವಿಧಾನವನ್ನೇ ಅಪಾಯದಲ್ಲಿಟ್ಟಿದೆ. ಸಂವಿಧಾನದ ಉಳಿವೇ, ಈ ದೇಶದ ಉಳಿವು. ಇದೇ ಈ ಸಭೆಯ ಉದ್ದೇಶ ಎಂದು ಹೇಳಿದ್ದಾರೆ.
2 ಈ ದೇಶದ ಪ್ರತಿಯೊಬ್ಬ ನಾಗರಿಕನ ಬದುಕಿಗೆ ರಕ್ಷಣೆ ಒದಗಿಸಿರುವುದೇ ಸಂವಿಧಾನ. ಆದರೆ ಬಿಜೆಪಿಯವರು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳುತ್ತಾರೆ. ಸಂವಿಧಾನ ಬದಲಾಯಿಸುವುದೆಂದರೆ ನಾಗರಿಕರ ಬದುಕಿನ ಹಕ್ಕು ಕಸಿದುಕೊಂಡಂತೆ. ಕೇಂದ್ರದ ಈ ಧೋರಣೆ ವಿರುದ್ಧ ಪ್ರಮುಖ ವಿರೋಧ ಪಕ್ಷಗಳೆಲ್ಲಾ ಒಗ್ಗಟ್ಟಾಗಿ ಹೋರಾಡಲೇಬೇಕಿದೆ ಎಂದು ಹೇಳಿದ್ದಾರೆ.
ಅಧಿಕಾರದಲ್ಲಿರುವ ಕೇಂದ್ರದ NDA ಕೂಟ ವಿಭಜಿಸುವುದರಲ್ಲಿ ನಂಬಿಕೆಯಿಟ್ಟಿದೆ. ಆದರೆ ನಾವು ಒಗ್ಗೂಡಿಸುವುದರಲ್ಲಿ ನಂಬಿಕೆಯಿಟ್ಟಿದ್ದೇವೆ. ದ್ವೇಷ ಅವರ ದೇವರು, ಪ್ರೀತಿ ನಮ್ಮ ದೇವರು. ಅವರ ಹೃದಯದಲ್ಲಿ ಧರ್ಮಾಂಧತೆಯಿದೆ. ನಮ್ಮಲ್ಲಿ ಕೂಡಿ ಬಾಳುವ ಸೌಹಾರ್ದತೆಯಿದೆ. ಸಾಮರಸ್ಯದ ದೇಶ ಕಟ್ಟುವ ಸಲುವಾಗಿಯೇ ಸಮಾನಮನಸ್ಕರ ಈ ಸಭೆ ನಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
3
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 17, 2023
ಅಧಿಕಾರದಲ್ಲಿರುವ ಕೇಂದ್ರದ NDA ಕೂಟ ವಿಭಜಿಸುವುದರಲ್ಲಿ ನಂಬಿಕೆಯಿಟ್ಟಿದೆ.
ಆದರೆ ನಾವು ಒಗ್ಗೂಡಿಸುವುದರಲ್ಲಿ ನಂಬಿಕೆಯಿಟ್ಟಿದ್ದೇವೆ.
ದ್ವೇಷ ಅವರ ದೇವರು, ಪ್ರೀತಿ ನಮ್ಮ ದೇವರು.
ಅವರ ಹೃದಯದಲ್ಲಿ ಧರ್ಮಾಂಧತೆಯಿದೆ.
ನಮ್ಮಲ್ಲಿ ಕೂಡಿ ಬಾಳುವ ಸೌಹಾರ್ದತೆಯಿದೆ.
ಸಾಮರಸ್ಯದ ದೇಶ ಕಟ್ಟುವ ಸಲುವಾಗಿಯೇ ಸಮಾನಮನಸ್ಕರ ಈ ಸಭೆ ನಡೆಯುತ್ತಿದೆ.