ಚಾಮರಾಜನಗರ: ತನ್ನ ಒಂದು ವರ್ಷದ ಮಗುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾದ ತಾಯಿ
ಚಾಮರಾಜನಗರ: ಹೆತ್ತ ತಾಯಿಯೇ ತನ್ನ ಒಂದು ವರ್ಷದ ಮಗುವನ್ನು ಬಸ್ ನಿಲ್ದಾಣದಲ್ಲಿದ್ದ ಅಪರಿಚಿತ ಅಜ್ಜಿಗೆ ಕೊಟ್ಟು ಪರಾರಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಸಂಜೆ ನಡೆದಿದೆ.
ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಕಲಿಗೌಡನಹಳ್ಳಿಗೆ ತೆರಳಲು ಕುಳಿತಿದ್ದ ಮಹದೇವಮ್ಮ ಎಂಬ ಅಜ್ಜಿಯ ಬಳಿಗೆ ಬಂದ ಮಹಿಳೆಯೊಬ್ಬಳು ಶೌಚಾಲಯಕ್ಕೆ ಹೋಗಿ ಬರುವುದಾಗಿ ತಿಳಿಸಿ ಮಗುವನ್ನು ಕೊಟ್ಟು ಹೋದವಳು ಸುಮಾರು ಹೊತ್ತಾದರೂ ಬರಲಿಲ್ಲ. ಗಾಬರಿಗೊಂಡ ಮಹದೇವಮ್ಮ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಈ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ ಸಿಸಿ ಟಿವಿ ಪರಿಶೀಲಿಸಿದಾಗ ಹಳದಿ ಸೀರೆ ಧರಿಸಿದ ಮಹಿಳೆಯೊಬ್ಬರು ಮಗುವನ್ನು ಮಹದೇವಮ್ಮಗೆ ಕೊಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಒಂದು ವರ್ಷದ ಹೆಣ್ಣು ಮಗುವನ್ನು ವಶಕ್ಕೆ ಪಡೆದ ಪೊಲೀಸರು ಮಹಿಳಾ ಕಲ್ಯಾಣ ಸಮಿತಿಯ ಸೂಚನೆ ಮೇರೆಗೆ ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಬಾಲ ಮಂದಿರದಲ್ಲಿ ದಾಖಲಿಸಿದ್ದಾರೆ.
ಹೆತ್ತವಳಿಗೇ ಹೊರೆಯಾಯಿತೇ..?
— Jafar Swadiq (@JafarSwadiq3) December 21, 2023
ಹೆತ್ತ ತಾಯಿಯೊಬ್ಬಳು ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಅಪರಿಚಿತ ಮಹಿಳೆಯೊಬ್ಬರಿಗೆ ನೀಡಿ ಪರಾರಿಯಾದ ಹೃದಯ ವಿದ್ರಾವಕ ಘಟನೆ ಚಾಮರಾಜ ನಗರದ ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಇದೀಗ ಆಅನಾಥ ಹೆಣ್ಣು ಮಗುವನ್ನು ಸ್ಥಳೀಯ ಬಾಲಾಶ್ರಮವೊಂದಕ್ಕೆ ದಾಖಲಿಸಲಾಗಿದೆ… pic.twitter.com/kwjPzJ03ap