ಚಾಮರಾಜನಗರ : ಕಾಡಂಚಿನ ಗ್ರಾಮಸ್ಥರಿಗೆ ತಲೆನೋವಾಗಿದ್ದ ಹೆಬ್ಬುಲಿ ಸೆರೆ
ಚಾಮರಾಜನಗರ : ಕಾಡಂಚಿನ ಗ್ರಾಮಸ್ಥರಿಗೆ ತಲೆನೋವಾಗಿದ್ದ ಹೆಬ್ಬುಲಿಯನ್ನು ಅರಣ್ಯ ಇಲಾಖೆಯವರು ಸೆರೆಹಿಡಿದಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಲಯದ ಓಂಕಾರ ವಲಯದ ಕಲ್ಲಾರೆ ಕಂಡಿ ಬಳಿ ಸೋಮವಾರ ಸಂಜೆ ಕ್ಯಾಮರಾದಲ್ಲಿ ಹುಲಿ ಚಿತ್ರಣ ದಾಖಲಾಗಿತ್ತು.
ಮಂಗಳವಾರ ಮುಂಜಾನೆ ಹುಲಿಯ ಸೆರೆಗೆ ಇಡಲಾಗಿದ್ದ ಜಾನುವಾರು ಮಾಂಸವನ್ನು ತಿನ್ನಲು ಬಂದ ಹುಲಿಗೆ ಬಲೆ ಹಾಕಿ ಸೆರೆ ಹಿಡಿದು ಅರವಳಿಕೆ ಚುಚ್ಚು ಮದ್ದು ನೀಡಿ ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಗಿದೆ.
ಬಂಡೀಪುರ ಹುಲಿಯೋಜನೆಯ ನಿರ್ದೇಶಕ ರಮೇಶ್ ಕುಮಾರ್ , ಹೆಡಿಯಾಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ಪರಮೇಶ್, ಪಶು ವೈದ್ಯಾಧಿಕಾರಿ ಡಾ. ಮಿರ್ಜಾ, ಡಾ. ಪ್ರದೀಪ್ ಹಾಗೂ ಸಿಬ್ಬಂದಿಗಳು ಮತ್ತು ಕಾಡಂಚಿನ ಗ್ರಾಮಗಳ ಗ್ರಾಮಸ್ಥರು ಹುಲಿ ಸೆರೆಗೆ ಸಹಕರಿಸಿದ್ದರು.
Next Story