ವಿರೋಧ ಪಕ್ಷಗಳ ಸಭೆಗೆ ಆಗಮಿಸುವ ಗಣ್ಯರಿಗೆ ಸ್ವಾಗತ ಕೋರಿದ ಸಿ ಎಂ ಸಿದ್ದರಾಮಯ್ಯ
facebook.com/Siddaramaiah.Official
ಬೆಂಗಳೂರು: ಇಂದಿನಿಂದ ಎರಡು ದಿನಗಳ ವರೆಗೆ ನಡೆಯಲಿರುವ ವಿರೋಧ ಪಕ್ಷಗಳ ಸಭೆಗೆ ಆಗಮಿಸಲಿರುವ ಗಣ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಸರ್ವಾಧಿಕಾರಿ, ಕೋಮುವಾದಿ ಮತ್ತು ಭ್ರಷ್ಟ ಪ್ರಭುತ್ವದ ವಿರುದ್ದದ ಹೋರಾಟದಲ್ಲಿ ಒಂದಾಗಲು ಆಗಮಿಸುತ್ತಿರುವ ದೇಶದ ಪ್ರಮುಖ ವಿರೋಧಪಕ್ಷಗಳ ನಾಯಕರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ’ ಎಂದು ಹೇಳಿದ್ದಾರೆ.
‘ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಪ್ರಭುತ್ವದ ಆಶಯಗಳ ಕೂಡು ಬದುಕಿನ ದೀರ್ಘ ಪರಂಪರೆ ಹೊಂದಿರುವ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಬಿತ್ತಿದ ಬೀಜ, ಬೆಳೆದು ಫಲ ನೀಡಲಿ ಎನ್ನುವುದು ಕನ್ನಡಿಗರೆಲ್ಲರ ಒಕ್ಕೊರಲಿನ ಹಾರೈಕೆ’ ಎಂದಿದ್ದಾರೆ.
ಸರ್ವಾಧಿಕಾರಿ, ಕೋಮುವಾದಿ ಮತ್ತು ಭ್ರಷ್ಟ ಪ್ರಭುತ್ವದ ವಿರುದ್ದದ ಹೋರಾಟದಲ್ಲಿ ಒಂದಾಗಲು ಆಗಮಿಸುತ್ತಿರುವ ದೇಶದ ಪ್ರಮುಖ ವಿರೋಧಪಕ್ಷಗಳ ನಾಯಕರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ.
— Siddaramaiah (@siddaramaiah) July 17, 2023
ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಪ್ರಭುತ್ವದ ಆಶಯಗಳ ಕೂಡು ಬದುಕಿನ ದೀರ್ಘ ಪರಂಪರೆ ಹೊಂದಿರುವ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಬಿತ್ತಿದ ಬೀಜ, ಬೆಳೆದು ಫಲ…