ಕಾಂಬೋಡಿಯಾಗೆ ತೆರಳುತ್ತಿರುವ ‘ಉಬುಂಟು’ ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ ಶುಭ ಹಾರೈಕೆ
ಬೆಂಗಳೂರು, ಆ. 22: ಕಾಂಬೋಡಿಯಾ ದೇಶಕ್ಕೆ ತೆರಳುತ್ತಿರುವ ‘ಉಬುಂಟು’ ಮಹಿಳಾ ಉದ್ಯಮಿಗಳ ನಿಯೋಗವು ಉಬುಂಟು ಅಧ್ಯಕ್ಷೆ ಹಾಗೂ ಸಂಸ್ಥಾಪಕಿ ರತ್ನಪ್ರಭಾ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.
ದಿಲ್ಲಿ, ಜೈಪುರ, ಕೊಲ್ಕತ್ತಾ, ವಿಶಾಖಪಟ್ಟಣಂ, ಬೆಂಗಳೂರು, ಮೈಸೂರು, ಚೆನ್ನೈ, ಮುಂಬೈ ಹೈದರಾಬಾದ್, ಕೋಚ್ಚಿನ್ ರಾಜ್ಯಗಳ ಮಹಿಳೆಯರು ನಿಯೋಗದಲ್ಲಿದ್ದು, ಆ.26ರಿಂದ 29ರ ವರೆಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಭಾರತ ಹಾಗೂ ಕಾಂಬೋಡಿಯಾ ಸಂಸ್ಥೆಗಳ ನಡುವೆ 5 ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ರತ್ನಪ್ರಭಾ ವಿವರಿಸಿದರು. ಉಬುಂಟು ಸಂಸ್ಥಾಪಕಿ ರತ್ನಪ್ರಭಾ, ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಛಾಯಾ ನಂಜಪ್ಪ, ಎಫ್ಕೆಸಿಸಿಐ ಸೇರಿದಂತೆ ವಿವಿಧ ಸಂಸ್ಥೆಯ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ. ಪ್ರವಾಸ ಫಲಪ್ರದವಾಗಲಿ ಎಂದು ಮುಖ್ಯಮಂತ್ರಿ ಶುಭ ಹಾರೈಸಿದರು.
Next Story