ರಾಜ್ಯಗಳ ಅಧಿಕಾರ ರಕ್ಷಣೆಗೆ ಬದ್ಧ: ತಮಿಳುನಾಡು ಸಿಎಂ ಸ್ಟಾಲಿನ್ಗೆ ಸಿಎಂ ಸಿದ್ಧರಾಮಯ್ಯ ಪತ್ರ

ಸಿದ್ದರಾಮಯ್ಯ/ಸ್ಟಾಲಿನ್(PTI)
ಬೆಂಗಳೂರು : ‘ಜನಸಂಖ್ಯೆಯನ್ನು ಆಧರಿಸಿ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆ ವಿರೋಧಿಸಿ ಮಾ.22ಕ್ಕೆ ತಮಿಳುನಾಡಿನಲ್ಲಿ ನಡೆಯಲಿರುವ ಸಭೆಗೆ ನಮ್ಮ ಬೆಂಬಲವಿದ್ದು, ಒಕ್ಕೂಟ ತತ್ವ ಹಾಗೂ ರಾಜ್ಯಗಳ ಅಧಿಕಾರ ರಕ್ಷಣೆಗೆ ಬದ್ಧ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಗುರುವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾ.22ರ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಳುಹಿಸಿಕೊಡುವೆ. ರಾಜ್ಯಗಳ ಸ್ವಾಯತ್ತತೆ ಹಾಗೂ ಕ್ಷೇತ್ರಗಳ ಪುನರ್ ವಿಂಗಡನೆ ಬಗ್ಗೆ ತಮ್ಮ ಪತ್ರ ನನಗೆ ತಲುಪಿದೆ. ನನಗೆ ಮಾ.22ಕ್ಕೆ ಪೂರ್ವ ನಿಗದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆ ಸಭೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕಳುಹಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
Next Story