ಇಂಧನ ಸಚಿವ ಕೆ.ಜೆ ಜಾರ್ಜ್ ಕಾಣೆಯಾಗಿದ್ದಾರೆ ಎಂಬ ಬಿಜೆಪಿ ಪೋಸ್ಟರ್ ಗೆ ಕಾಂಗ್ರೆಸ್ ತಿರುಗೇಟು
ಕೇಂದ್ರ ಸಚಿವರ ಜೊತೆ ಕೆ.ಜೆ. ಜಾರ್ಜ್
ಬೆಂಗಳೂರು: ʼʼರಾಜ್ಯವನ್ನು ಕತ್ತಲೆಗೆ ದೂಡಿ ಕಾಣೆಯಾಗಿದ್ದಾರೆʼʼ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ಭಾವಚಿತ್ರವುಳ್ಳ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ರಾಜ್ಯ ಬಿಜೆಪಿ ಘಟಕಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.
ʼʼಪ್ರೀತಿಯ ಬಿಜೆಪಿ ನಾಯಕರೇ, ಕಾಣೆಯಾಗಿರುವುದು ನಿಮ್ಮ ಪಕ್ಷದ ಅಧ್ಯಕ್ಷ, ಕಾಣೆಯಾಗಿರುವುದು ಬಿಜೆಪಿಯ 25 ಸಂಸದರು, ಕಾಣೆಯಾಗಿರುವುದು ವಿರೋಧ ಪಕ್ಷದ ನಾಯಕ!ʼʼ ಎಂದು ಕಾಂಗ್ರೆಸ್ X ನಲ್ಲಿ ಪ್ರತಿಕ್ರಿಯಿಸಿದೆ.
ʼʼರಾಜ್ಯದಲ್ಲಿ ಬರದ ಕಾರಣ ವಿದ್ಯುತ್ ಉತ್ಪಾದನೆ ಇಳಿಕೆಯಾಗಿದೆ. ಹಾಗೂ ಬೇಡಿಕೆ ಹೆಚ್ಚಿದೆ, ಈ ಹಿನ್ನೆಲೆಯಲ್ಲಿ ಸಚಿವ ಕೆ ಜೆ ಜಾರ್ಜ್ ಅವರು ನಿಮ್ಮದೇ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ ಚರ್ಚಿಸಲು ದೆಹಲಿಗೆ ಹೋಗಿದ್ದಾರೆ. ನಿಮ್ಮ ಕೇಂದ್ರ ಸಚಿವರ ಕಾರ್ಯಕ್ರಮಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲವೆಂದರೆ ನಿಮ್ಮಲ್ಲಿ ನೈತಿಕತೆ ಕಾಣೆಯಾಗಿರುವುದು ಸ್ಪಷ್ಟವಾಗುತ್ತದೆ. ನಮ್ಮ ಸಚಿವರು ಸದಾ ತಮ್ಮ ಹೊಣೆಗಾರಿಕೆಯ ಕೆಲಸಗಳಲ್ಲಿ ತೊಡಗಿರುತ್ತಾರೆ, ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಬೇಕಾದ ಮಾರ್ಗಗಳನ್ನು ಹುಡುಕುತ್ತಾರೆʼʼ ಎಂದು ತಿರುಗೇಟು ನೀಡಿದೆ.
ʼʼಬಿಜೆಪಿ ಒಂದೇ ಒಂದು ಪ್ರಶ್ನೆಗೆ ಉತ್ತರಿಸಲಿ, ವಿರೋಧ ಪಕ್ಷದ ನಾಯಕನ ಆಯ್ಕೆ ಯಾವಾಗ?ʼʼ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
- ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್
ಡಿಯರ್ @BJP4Karnataka ,
— Karnataka Congress (@INCKarnataka) October 12, 2023
ಕಾಣೆಯಾಗಿರುವುದು ನಿಮ್ಮ ಪಕ್ಷದ ಅಧ್ಯಕ್ಷ, ಕಾಣೆಯಾಗಿರುವುದು ಬಿಜೆಪಿಯ 25 ಸಂಸದರು, ಕಾಣೆಯಾಗಿರುವುದು ವಿರೋಧ ಪಕ್ಷದ ನಾಯಕ!
ರಾಜ್ಯದಲ್ಲಿ ಬರದ ಕಾರಣ ವಿದ್ಯುತ್ ಉತ್ಪಾದನೆ ಇಳಿಕೆಯಾಗಿದೆ. ಹಾಗೂ ಬೇಡಿಕೆ ಹೆಚ್ಚಿದೆ, ಈ ಹಿನ್ನೆಲೆಯಲ್ಲಿ ಸಚಿವ ಕೆ ಜೆ ಜಾರ್ಜ್ ಅವರು ನಿಮ್ಮದೇ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ… https://t.co/q6FsHg14x6 pic.twitter.com/guoHEEvLNc