ನಾಡ ದೇವತೆಯ ಹೆಸರಿನಲ್ಲಿ ದೊಡ್ಡ ಭವನ ನಿರ್ಮಾಣ: ಸಿಎಂ ಸಿದ್ದರಾಮಯ್ಯ
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು, ನ.1: ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ನಾಮಕರಣವಾಗಿ ಐವತ್ತು ವರ್ಷ ಪೂರೈಸಿದ್ದು, ನಾಡ ದೇವತೆ ಭುವನೇಶ್ವರಿ ಹೆಸರಿನಲ್ಲಿ ದೊಡ್ಡ ಭವನವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕರ್ನಾಟಕ ರಾಜ್ಯವೆಂದು ನಾಮಕರಣವಾಗಿ ಐವತ್ತು ವರ್ಷ ಪ್ರಯುಕ್ತ ನಾನು ಇಡಿ ವರ್ಷ ಇದನ್ನು ಆಚರಣೆ ಮಾಡಲು ಬಜೆಟ್ ನಲ್ಲಿ ಘೋಷಣೆ ಮಾಡಿದ್ದೇನೆ. ಹಾಗೆಯೇ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದ್ದೇವೆ. ಹಿಂದಿನ ಸರಕಾರವೇ 50ನೇ ವರ್ಷವೆಂದು ಆಚರಣೆ ಮಾಡಬೇಕಾಗಿತ್ತು. ಆದರೆ, ಅವರು ಯಾಕೆ ಮರೆತರು ಗೊತ್ತಿಲ್ಲ ಎಂದರು.
ಇಡೀ ರಾಜ್ಯದಲ್ಲಿ ಕನ್ನಡದ ವಾತಾವರಣ ಇರಬೇಕು. ರಾಜ್ಯದಲ್ಲಿ ಕನ್ನಡದ ಅನಿವಾರ್ಯತೆಯನ್ನು ನಿರ್ಮಾಣ ಮಾಡಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಬೇಕು. ಸಾಹಿತ್ಯ, ಸಂಸ್ಕೃತಿ, ಪರಂಪರೆ, ಕಲೆ, ವಿಜ್ಞಾನ ಸೇರಿದಂತೆ ಅವರ ಸಾ‘ನೆ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಅಸಮಾನತೆ ಇರುವರೆಗೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ಹುಟ್ಟುವಾಗ ಎಲ್ಲರೂ ವಿಶ್ವಮಾನವರಾಗಿ ಹುಟ್ಟುವ ನಾವು ಸಮಾಜಿಕ ಜಾತಿ ಪದ್ಧತಿಯು ಪ್ರ‘ಾವಕ್ಕೆ ಒಳಗಾಗಿ ಸಂಕುಚಿತರಾಗುತ್ತಾರೆ. ನಿಜಗುಣ ಶ್ರೀಗಳು ನೀಡಿದ ಸಲಹೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.
ಶಕ್ತಿ ಯೋಜನೆ ಆರಂ‘ವಾದ ಬಳಿಕ ಮಹಿಳೆಯರಿಗೆ 86 ಕೋಟಿ ಮಹಿಳೆಯರು ಸರಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಸಮಾಜದ ಋಣ ತೀರಿಸುವ ಕೆಲಸವನ್ನು ಸ್ವಲ್ಪವಾದರೂ ತಿರೀಸಬೇಕು. ಋಣ ತೀರಿಸುವ ಕೆಲಸವೇ ನಾವು ಮಾಡಬೇಕಾದ ಸಮಾಜಸೇವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ, ಉನ್ನತ ಶಿಕ್ಷಣ ಇಲಾಖೆ ಸಚಿವ ಸು‘ಾಕರ್, ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್ , ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವೈಚಾರಿಕತೆ ಇಟ್ಟುಕೊಂಡು, ಸಾಂಪ್ರದಾಯವಾದಿ, ಜಾತಿವಾದಿ, ಟೀಕಿಸುವವರಿಗೆ ಪಟ್ಟ‘ದ್ರ ಹಿತಾಸಕ್ತಿಗಳಿಂದ ಕೊಲೆ ಬೆದರಿಕೆಗಳು ಬರುತ್ತವೆ. ಹಾಗಾಗಿ ‘ದ್ರತೆಯನ್ನು ಒದಗಿಸಿ ಸರ್ವ ಜನಾಂಗದ ಶಾಂತಿಯ ತೋಟ್ವನ್ನಾಗಿ ಮಾಡಬೇಕು ಎಂದು ಪ್ರಶಸ್ತಿ ಪುರಸ್ಕೃತರಾದ ನಿಜಗುಣಾನಂದ ಸ್ವಾಮೀಜಿ ಸರಕಾರಕ್ಕೆ ಮನವಿ ಮಾಡಿದರು.
68 ಸಾಧಕರಿಗೆ, 10 ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ
ನಿಜಗುಣಾನಂದ ಸ್ವಾಮೀಜಿ, ಪರ್ಕಳ ಅಬ್ದುಲ್ಲಾ ಹಾಜಿ, ದಿನೇಶ್ ಅಮಿನ್ ಮಟ್ಟು, ಚಾರ್ಮಾಡಿ ಹಸನಬ್ಬ ಸೇರಿದಂತೆ 68 ಸಾಧಕರಿಗೆ, ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ʼಮೀಫ್ʼ, ಮೌಲಾನ ಅಝಾದ್ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿ ಸಂಘ, ಮಾರುತಿ ಜನಸೇವಾ ಸಂಘ, ಕರ್ನಾಟಕ ಸಂಘ ಸೇರಿದಂತೆ 10 ಸಂಘ-ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
-ನಿಜಗುಣಾನಂದ ಸ್ವಾಮೀಜಿ