ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಸಂವಿಧಾನಬಾಹಿರ : ಹೈಕೋರ್ಟ್ ತೀರ್ಪು
ಬೆಂಗಳೂರು: ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿ ಸೆಕ್ಷನ್ 128A ಸಂವಿಧಾನಬಾಹಿರ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ.
2023ರಲ್ಲಿ ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಮಾಡಿದ್ದ ಸರಕಾರವು ಸಿಬ್ಬಂದಿಗಳ ನೇಮಕ, ವರ್ಗಾವಣೆ, ಶಿಸ್ತು ಕ್ರಮದ ಅಧಿಕಾರ ಪಡೆದಿತ್ತು. ಇದರಿಂದ ಸಹಕಾರ ಸಂಘಗಳ ಸ್ವಾಯತ್ತೆಗೆ ಧಕ್ಕೆ ಎಂದು ಸಹಕಾರ ಸಂಘಗಳ ಪರ ಹಿರಿಯ ವಕೀಲ ಎ.ಕೇಶವ ಭಟ್ ವಾದಿಸಿದ್ದರು. ತಿದ್ದುಪಡಿವು ಸಂವಿಧಾನದ ಆರ್ಟಿಕಲ್ 19(1) ಸಿ ಉಲ್ಲಂಘನೆ ಎಂದು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಹೈಕೋರ್ಟ್ ಪೀಠ ತೀರ್ಪು ನೀಡಿದೆ.
Next Story