ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ವಿಚಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಕಿರುಸಾಲ ಬಲವಂತದ ಕ್ರಮಗಳ ಪ್ರತಿಬಂಧಕ ಸುಗ್ರೀವಾಜ್ಞೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಕರ್ನಾಟಕ ಹೈರ್ ಪರ್ಚೇಸ್ ಅಸೋಸಿಯೇಷನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರ ಪರ ವಕೀಲು, ಸಾಲ ನೀಡುವ ಎಲ್ಲರಿಗೂ ಈ ಕಾಯ್ದೆ ಅನ್ವಯವಾಗುವಂತೆ ಮಾಡಿದ್ದಾರೆ. ದುರ್ಬಲ ವರ್ಗದವರು ಯಾರೆಂಬುದಕ್ಕೆ ಮಾನದಂಡವನ್ನೇ ರೂಪಿಸಿಲ್ಲ. ವಾಹನಗಳಿಗೆ ನೀಡುವ ಸಾಲಕ್ಕೂ ಅನ್ವಯಿಸುವ ಸಾಧ್ಯತೆಯಿದೆ ಎಂದು ವಾದಿಸಿದರು.
ಅರ್ಜಿದಾರರ ವಾದಕ್ಕೆ ಎಜಿ ಶಶಿಕಿರಣ್ ಶೆಟ್ಟಿ, ಮೈಕ್ರೋ ಫೈನಾನ್ಸ್ ಗಳಿಗೆ ಮಾತ್ರ ಈ ನಿಯಮಗಳು ಅನ್ವಯವಾಗುತ್ತದೆ. ವಾರ್ಷಿಕ 3 ಲಕ್ಷಕ್ಕಿಂತ ಕಡಿಮೆ ವರಮಾನದವರಿಗೆ ಭದ್ರತೆ ರಹಿತ ಸಾಲಕ್ಕೆ ಅನ್ವಯವಾಲಿದೆ. ಸಾಲ ನೀಡಿದವರ ಕಿರುಕುಳದಿಂದ 3 ತಿಂಗಳಿನಲ್ಲಿ 17 ಆತ್ಮಹತ್ಯೆಗಳು ನಡೆದಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ ಸಾಲ ನೀಡಿದವರು ಬಡಜನರಿಗೆ ಕಿರುಕುಳ ನೀಡಿರುವ ಉದಾಹರಣೆಗಳಿವೆ. ಸಾಲ ಪಡೆದ ಬಡ ಜನರಿಗೆ ಟಾರ್ಚರ್ ನೀಡಬಾರದು. ಸುಗ್ರೀವಾಜ್ಙೆ ಬಗ್ಗೆ ಸ್ಪಷ್ಟೀಕರಣ ಅಗತ್ಯವಿದೆ ಎಂದು ನ್ಯಾ.ಎಂ.ನಾಗಪ್ರಸನ್ನ ಅಭಿಪ್ರಾಯ ಎಂದು ಅಭಿಪ್ರಾಯ ಪಟ್ಟು ಕಿರು ಸಾಲ ಸುಗ್ರೀವಾಜ್ಙೆ ಸಂಬಂಧ ಆದೇಶ ಕಾಯ್ದಿರಿಸಿದರು.