ದಾವಣಗೆರೆ: ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಕರವೇ ಕಾರ್ಯಕರ್ತರು
ದಾವಣಗೆರೆ: ಕಾವೇರಿ ನೀರಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ರವಾನಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾವೇರಿ ವಿಚಾರವಾಗಿ ಸಂಕಷ್ಟ ಸೂತ್ರ ಜಾರಿಗೊಳಿಸಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.
ಈ ಸಂಬಂಧ ಜಿಲ್ಲಾಧ್ಯಕ್ಷ ರಾಮೇಗೌಡ ಮಾತನಾಡಿ, ಕಾವೇರಿ ವಿಚಾರದಲ್ಲಿ ಈಗಾಗಲೇ ರಾಜ್ಯದಲ್ಲಿ ಹಲವಾರು ಹೋರಾಟಗಳನ್ನು ಮಾಡಿ ರಾಜ್ಯದ ಮತ್ತು ಕೇಂದ್ರದ ಗಮನ ಸೆಳೆದಿದ್ದರು. ರೈತರಿಗೆ ಮೋಸವಾಗಿದೆ. ಈ ಕೂಡಲೇ ಪ್ರಧಾನ ಮಂತ್ರಿಗಳು ತಕ್ಷಣ ಕರ್ನಾಟಕ -ತಮಿಳುನಾಡು, ಕೇರಳ, ಪಾಂಡಿಚೇರಿ ರಾಜ್ಯದ ಮುಖ್ಯಮಂತ್ರಿಗಳ ತುರ್ತು ಸಭೆ ಕರೆದು ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸಬೇಕೆಂದು ಒತ್ತಾಯಿಸಿದರು.
ರಾಜ್ಯದ 28 ಸಂಸದರು ಪ್ರಧಾನ ಮಂತ್ರಿ ಬೆಳಿ ನಿಯೋಗ ಹೋಗಿ ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ನೀರಿನ ಪ್ರಮಾಣ ಬಗ್ಗೆ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡು ಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ನಿಮ್ಮ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಎಂದು ಎಚ್ಚರಿಸಿದರು.
ಜಬಿವುಲ್ಲಾ . ಲೋಕೇಶ್. ಗೋಪಾಲ್ ದೇವರ ಮನಿ .ಶಿವಕುಮಾರ್ ಪಿ. ರವಿಕುಮಾರ್ .ಈಶ್ವರ್. ಮಹೇಶ್ವರಪ್ಪ .ಎಂಡಿ ರಫೀಕ್. ಖಾದರ್ ಭಾಷಾ. ಆಟೋ ರಫಿಕ್. ಮುಸ್ತಫ .ಭಾಷಾ. ದಾದಾಪೀರ್. ತನ್ವೀರ್. ಖಾದರ್ ಭಾಷಾ ಇತರರು ಇದ್ದರು.