ಬೆಂಗಳೂರಿಗೆ ನೀರು ಬಿಡುವುದನ್ನು ನಿಲ್ಲಿಸುವಂತೆ ಪಟ್ಟು: ಮಂಡ್ಯ ಪಂಪ್ಹೌಸ್ಗೆ ವಿವಿಧ ಕನ್ನಡ ಪರ ಸಂಘಟನೆಗಳ ಮುತ್ತಿಗೆ
ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು
ಮಂಡ್ಯ, ಸೆ.22: ಜಿಲ್ಲೆಯಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿದೆ. ಮಳವಳ್ಳಿ ತಾಲೂಕು ಹಲಗೂರು ಹೋಬಳಿ ತೊರೆ ಕಾಡನಹಳ್ಳಿಯ ಬಿಡ್ಬ್ಲೂ.ಎಸ್.ಎಸ್.ಬಿ. ಮುಖ್ಯ ದ್ವಾರದ ಬಳಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿಗೆ ನೀರು ಬಿಡುವುದನ್ನ ನಿಲ್ಲಿಸುವಂತೆ ಆಗ್ರಹಿಸಿ ಬೆಂಗಳೂರು ಜಲ ಮಂಡಳಿಯ ಪಂಪ್ ಹೌಸ್ ಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಕೂಡಲೇ ಹೋರಾಟಗಾರರನ್ನು ಬಂಧಿಸಿದರು.
ಶುಕ್ರವಾರ ಟಿ.ಕೆ.ಹಳ್ಳಿಯ ಬೆಂಗಳೂರು ಜಲ ಮಂಡಳಿ ಮುಖ್ಯ ಗೇಟ್ ಬಳಿ ಸಂಪೂರ್ಣವಾಗಿ ನೀರು ನಿಲ್ಲಿಸುವಂತೆ ಹಾಗೂ ರೈತರ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿ ಸುಮಾರು ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಬಳಿಕ ಬೆಂಗಳೂರು ಕಾವೇರಿ ನೀರು ಸರಬರಾಜು ಮಾಡುವ ಪಂಪ್ ಹೌಸ್ ಒಳಗೆ ನುಗ್ಗಲು ಗೇಟ್ ತಳ್ಳಿ ಒಳಗೆ ಪ್ರವೇಶ ಮಾಡಲು ಮುಂದಾಗುತ್ತಿದ್ದಂತೆ ಪ್ರತಿ ಭಟನಕಾರರನ್ನ ಪೊಲೀಸರು ಬಂಧಿಸಿದರು.
ʼʼತಮಿಳು ನಾಡಿಗೆ ನೀರು ಬಿಟ್ಟಿರುವುದನ್ನ ಖಂಡಿಸಿ ಮಂಡ್ಯ ,ಮೈಸೂರು,ಚಾಮರಾಜ ನಗರ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಕಾವೇರಿಯ ನೀರು ಬಹುತೇಕ ಕುಡಿಯುವ ನೀರು ಬಳಸಿಕೊಳ್ಳುತ್ತಿರುವ ಬೆಂಗಳೂರಿನ ಜನತೆ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಸಮ್ಮನಿದ್ದಾರೆ. ಕೂಡ ಕಾವೇರಿ ಹೋರಾಟದಲ್ಲಿ ಬೆಂಗಳೂರು ಮಂದಿ ಭಾಗಿಯಾಗಿ ಸರ್ಕಾರಕ್ಕೆ ಒತ್ತಡ ತರಬೇಕಿತ್ತು ಆದರೆ ಇದರ ವಿರುದ್ಧ ಇದ್ದಾರೆ ಅವರಿಗೆ ತಮಿಳುನಾಡಿಗೆ ನೀರು ಹರಿಸುತ್ತಿದ್ದರು ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಿಲ್ಲ .ನೀರು ಪೂರೈಕೆ ಸ್ಥಗಿತ ಮಾಡಿದರೆ ಬೆಂಗಳೂರು ಮಂದಿಗೆ ಬುದ್ದಿ ಕಲಿತಾರೆʼʼ ಎಂದು ಪ್ರತಿಭನಾಕಾರರು ಆಕ್ರೋಶ ವ್ಯಕ್ತಪಡಿಸಿದುರು. ಇದೇ ವೇಳೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷರಾದ ಕನ್ನಡ ಪ್ರಕಾಶ್, ಲೋಕೇಶ್ ಗೌಡ, ನರಸಿಂಹಮೂರ್ತಿ, ನೀಲೇಶ್ ಗೌಡ, ರಘು, ರಶ್ಮಿ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.