ಅಂಬಾನಿ ಅವರ ಹುಟ್ಟು ಹಬ್ಬಕ್ಕೆ Jio ಉಚಿತ ರಿಚಾರ್ಜ್ ಕೊಡುಗೆ ನೀಡಿದೆಯೇ?: ಇಲ್ಲಿದೆ ವಾಸ್ತವಾಂಶ
ಬೆಂಗಳೂರು: ʼʼಅಂಬಾನಿ ಅವರ ಹುಟ್ಟು ಹಬ್ಬಕ್ಕೆ ಜಿಯೊ ಕಂಪೆನಿಯು ಎಲ್ಲಾ ಬಳಕೆದಾರರಿಗೆ 239 ಮೌಲ್ಯದ 28 ದಿನಗಳ ಅವಧಿಯ ರೀಚಾರ್ಜ್ ಅನ್ನು ಉಚಿತವಾಗಿ ನೀಡುತ್ತಿದೆʼʼ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ನಿಜವಾದ ಮಾಹಿತಿಯಲ್ಲ, ಬದಲಿಗೆ ಮೋಸಗಾರರ ಮೋಸದ ಜಾಲವಾಗಿದೆ.
ಈ ಸಂಬಂಧ ರಾಯಚೂರು ಸೈಬರ್ ಪೊಲೀಸ್ ಠಾಣೆ ಪ್ರಕಟನೆ ಹೊರಡಿಸಿದ್ದು, ʼಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪಕ್ಕದ ಚಿತ್ರದಲ್ಲಿ ತೋರಿಸಿದಂತ ಜಿಯೋ ಕಂಪೆನಿಯ ಮಾಲಕರಾದ ಅಂಬಾನಿಯವರ ಹುಟ್ಟುಹಬ್ಬದ ಭಾಗವಾಗಿ ಜಿಯೋ ಕಂಪೆನಿಯು ಎಲ್ಲಾ ಭಾರತದ ಬಳಕೆದಾರರಿಗೆ 28 ದಿನಗಳ ಉಚಿತ ರಿಚಾರ್ಜ್ ಕೊಡಗೆ ನೀಡಿದ್ದಾರೆ, ಅದನ್ನು ಪಡೆಯಲು ಮೇಸೇಜ್‌ನಲ್ಲಿ ಕಂಡ ಲಿಂಕನ್ನು ಕ್ಲಿಕ್ ಮಾಡಿ ಎಂಬ ಮಾಹಿತಿ ಹರಿದಾಡುತ್ತಿದ್ದು, ಇದು ನೈಜವಾದ ಮಾಹಿತಿಯಲ್ಲಾ ಬದಲಿಗೆ ಮೋಸಗಾರರ ಮೋಸದ ಜಾಲವಾಗಿದೆʼ ಎಂದು ಹೇಳಿದೆ.
ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
ʼನೀವು myphoneoffer. com ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಅವರು ಸದರಿ ಮೆಸೇಜ್ ಅನ್ನು 10 ಜನರಿಗೆ ಪಾರ್ವಡ್ ಮಾಡಲು ತಿಳಿಸಿ ನಂತರ ಒಂದು ಆಪ್‌ನ್ನು ಇನ್ಸ್ಟಾಲ್ ಮಾಡಲು ತಿಳಿಸಿರುತ್ತಾರೆ. ಅದರಿಂದ ನಿಮ್ಮ ಮಾಹಿತಿ ಹಾಗೂ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ದೂರುಗಳಿಗಾಗಿ www.cybercrime.gov.in ಭೇಟಿ ನೀಡಿ ಅಥವಾ 1930 ಗೆ ಕರೆ ಮಾಡಿʼ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ರಾಯಚೂರು ಸೈಬರ್ ಪೊಲೀಸ್ ಠಾಣೆ ಪ್ರಕಟನೆ