ಅಸಮರ್ಥ ಬೊಮ್ಮಾಯಿ ಕೈಯಲ್ಲಿ ಅಧಿಕಾರ ಕೊಡೋದು ಬೇಡ: ಬಿಜೆಪಿ ಮಾಜಿ ಶಾಸಕ ನೆಹರೂ ಓಲೇಕಾರ್ ವಾಗ್ದಾಳಿ
ಹಾವೇರಿ: ʼಅಸಮರ್ಥರ ಕೈಯಲ್ಲಿ ಅಧಿಕಾರ ಕೊಡುವುದು ಸರಿಯಲ್ಲ. ಇದು ಪಕ್ಷಕ್ಕೆ ಹೊಡೆತ ಬೀಳುತ್ತದೆʼ ಎಂದು ಮತ್ತೊಮ್ಮೆ ನೆಹರೂ ಓಲೇಕಾರ್ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಒಲೇಕಾರ್, ನಾಯಕನಿಗೆ ಗಂಭೀರತೆ ಇರಕು. ಎಲ್ಲರನ್ನ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಇರಬೇಕು. ಬೊಮ್ಮಾಯಿ ಬಂದ ನಂತರ ಜಿಲ್ಲೆ, ರಾಜ್ಯದಲ್ಲಿ ಪಕ್ಷ ಕುಸಿಯಿತು. ಇವರ ಬಂಡವಾಳ ಎಲ್ಲರಿಗು ಗೊತ್ತಾಗಿದೆ, ವರಿಷ್ಠರು ಈಗಲಾದ್ರು ಆಲೋಚನೆ ಮಾಡಬೇಕು. ಅಸಮರ್ಥರ ಕೈಯಲ್ಲಿ ಅಧಿಕಾರ ಕೊಡುವುದು ಸರಿಯಲ್ಲ ಇದು ಪಕ್ಷಕ್ಕೆ ಹೊಡೆತ ಬೀಳುತ್ತದೆ. ಮುಂದೆ ಮತ್ತೆ ಬೊಮ್ಮಾಯಿಗೆ ಅಧಿಕಾರ ಕೊಟ್ರೆ ಪಕ್ಷ ಮತ್ತಷ್ಟು ಕುಗ್ಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ನನ್ನನ್ನ ಪಕ್ಷದ ಕಾರ್ಯಕ್ರಮಗಳಿಗೆ ಕರೆಯದಂತೆ ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇದು ದುರಾದೃಷ್ಟಕರ. ಪಕ್ಷ ಸಂಘಟನೆ ಮಾಡುವವರು ಮಾತನಾಡುವಂತದ್ದಲ್ಲ. ಚುನಾವಣೆಯಲ್ಲಿ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಜಿಲ್ಲೆಯಿಂದ ಸಿಎಂ ಆಗಿದ್ದು ಆ ಗೌರವ ಉಳಿಸಿಕೊಳ್ಳುವ ಕೆಲಸ ಮಾಡಲಿಲ್ಲ. ಹಣ ಚೆಲ್ಲಿ ತಾವೊಬ್ಬರೆ ಗೆದ್ದಿದ್ದು ಬಿಟ್ರೆ, ಜಿಲ್ಲೆಯ ಉಳಿದ ಕಡೆ ಗೆಲ್ಲಿಸುವ ಕೆಲಸ ಆಗಲಿಲ್ಲ. ನನ್ನ ಮೇಲೆ ಬೊಮ್ಮಾಯಿ ಸುಳ್ಳು ಆರೋಪ ಮಾಡಿದರು. ಇದರಿಂದ ನನಗೆ ನಷ್ಟವಾಗಲಿಲ್ಲ ಪಕ್ಷಕ್ಕೆ ನಷ್ಟವಾಯಿತು ಎಂದು ದೂರಿದರು.
ಮುಂದುವರಿದು ವಾಗ್ದಾಳಿ ನಡೆಸಿದ ಅವರು, ಸಿಎಂ ಆಗಿದ್ದಾಗ ಎಲ್ಲರನ್ನ ಬೊಮ್ಮಾಯಿ ಕೀಳು ದೃಷ್ಟಿಯಿಂದ ನೋಡಿದ್ದರು. ಚುನಾವಣೆಗೆ ಸೀಟು ಹಾಕಿಸಿಕೊಳ್ಳುವಾಗಲೂ ಹೊಂದಾಣಿಕೆ, ಚುನಾವಣೆಯಲ್ಲಿ ಹೊಂದಾಣಿಕೆ, ಬೊಮ್ಮಾಯಿಯವರ ಹೊಂದಾಣಿಕೆ ರಾಜಕೀಯದಿಂದ ಬಿಜೆಪಿ ಸೋತಿದೆ. ಬೊಮ್ಮಾಯಿಯಿಂದ ಬಿಜೆಪಿ ದಹಿಸಿ ಹೋಯಿತು. ಶಾಸಕರನ್ನ ಬೊಮ್ಮಾಯಿ ಗೌರವದಿಂದ ಕಾಣಲಿಲ್ಲ. ಇವರ ಆಟ ಎಲ್ಲಿಯವರೆಗೆ ನಡೆಯುತ್ತದೆ ನಡೆಯಲಿ ನೋಡುತ್ತಿದ್ದೇನೆ. ರಾಜ್ಯದಲ್ಲಿ ಇವತ್ತಿನ ಬಿಜೆಪಿ ಸ್ಥಿತಿಗೆ ಬೊಮ್ಮಾಯಿ ಕಾರಣ. ಯಡಿಯೂರಪ್ಪನವರಂತರವರ ಕೈಯಲ್ಲಿ ಜವಾಬ್ದಾರಿ ಕೊಟ್ರೆ, ಪಕ್ಷ ಸಂಘಟನೆ ಆಗುತ್ತದೆ ಎಂದು ಅವರು ಹೇಳಿದರು.