ರಾಮನ ಹೆಸರಲ್ಲಿ ರಾಜಕೀಯ ಬೇಡ: ಶಾಸಕ ಶರತ್ ಬಚ್ಚೇಗೌಡ
ಹೊಸಕೋಟೆ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯನ್ನು ನಾವೆಲ್ಲ ಸ್ವಾಗತಿಸುತ್ತೇವೆ. ಆದರೆ ರಾಮನ ಹೆಸರಲ್ಲಿ ರಾಜಕೀಯ ಬೇಡ ಎಂದು ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
ಹೊಸಕೋಟೆ ತಾಲೂಕಿನ ಅನಗನಹಳ್ಳಿಯಲ್ಲಿ ಮಾತನಾಡಿದ ಅವರು, ನಾನು ಕೂಡಾ ಹಿಂದು. ನಾನು ಮನೆಯಲ್ಲಿ ರಾಮ ಕೃಷ್ಣ ಇನ್ನಿತರೆ ದೇವರುಗಳನ್ನು ಪೂಜಿಸುತ್ತೇನೆ. ದೇಶದ ನಾಗರಿಕರೂ ಕೂಡ ಅವರಿಷ್ಟ ದೈವಗಳ ಆರಾಧನೆ ಮಾಡುತ್ತಾರೆ. ಆದರೆ ಸಾಮಾಜಿಕ ಕ್ಷೇತ್ರದಲ್ಲಿ ನಾನೊಬ್ಬ ಭಾರತೀಯ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು ಎಂದರು.
ತರಾತುರಿಯಲ್ಲಿ ಅಪೂರ್ಣವಾಗಿರುವಾಗಲೇ ರಾಮ ಮಂದಿರ ಉದ್ಘಾಟನೆಗೆ ಶಂಕರಾಚಾರ್ಯರ ಸಹಿತ ಹಲವು ಮಠಾಧೀಶರು ಕೂಡ ರಾಮ ಮಂದಿರ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಬಾರದು. ಧರ್ಮಾಧರಿತ ರಾಜಕಾರಣ ದೇಶದ ಪ್ರಗತಿಗೆ ಮಾರಕ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
Next Story