ʼʼಸೌಜನ್ಯಳಿಗೆ ಆದ ಗತಿಯೇ ನಿನ್ನ ಮಗಳಿಗೆ ಆಗುತ್ತೆʼʼ ಎಂದು ವ್ಯಕ್ತಿಗೆ ಬೆದರಿಕೆ ಹಾಕಿದ ಆರೋಪ: ಮಹೇಶ್ ವಿಕ್ರಮ್ ಹೆಗ್ಡೆ ವಿರುದ್ಧ FIR
ಬೆಂಗಳೂರು: ವ್ಯಕ್ತಿಯೋರ್ವರಿಗೆ ಬೆದರಿಕೆಹಾಕಿ ಮಾನಹಾನಿಕಾರ ಕಾಮೆಂಟ್ ಹಾಕಿದ ಆರೋಪದಡಿಯಲ್ಲಿ ಸುಳ್ಳು ಸುದ್ದಿ ಹರಡುವುದರಲ್ಲಿ ಕುಖ್ಯಾತಿ ಹೊಂದಿರುವ ʼಪೋಸ್ಟ್ ಕಾರ್ಡ್ʼ ಸಹ-ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ವಿರುದ್ಧ ನಗರದ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೂರುದಾರ ಸುರೇಶ್ ಬಾಬು ಮತ್ತು ಆತನ ಮಗಳ ಬಗ್ಗೆ ವಿಕ್ರಮ್ ಹೆಗಡೆ, ʼಟಿವಿ ವಿಕ್ರಮ್ʼ ಅಧಿಕೃತ ಪೇಜ್‌ನಲ್ಲಿ ಮಾನಹಾನಿಕಾರ ಕಾಮೆಂಟ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ದೂರುದಾರರಿಗೆ ಕರೆ ಮಾಡಿರುವ ಮಹೇಶ್ ವಿಕ್ರಮ್ ಹೆಗಡೆ, ʼʼನಾವು ಸೌಜನ್ಯಳನ್ನೇ ಬಿಟ್ಟಿಲ್ಲ.ಅಂತಹ ಕಟೀಲ್ ಕೈನಲ್ಲೂ ಏನೂ ಮಾಡಲು ಆಗಿಲ್ಲ. ಇನ್ನು ನೀನು ಏನ್ ಕಿತ್ಕೊಳ್ತಿಯಾ? ಎಂದು ಬೆದರಿಕೆ ಹಾಕಿದ್ದಲ್ಲದೇ, ಕೇಂದ್ರ ಸರ್ಕಾರ ನಮ್ಮ ಕೈಯಲ್ಲಿದೆ ಸೌಜನ್ಯಳಿಗೆ ಆದ ಗತಿಯೇ ನಿನ್ನ ಮಗಳಿಗೆ ಆಗುತ್ತೆ ಎಂಬ ರೀತಿ ಬೆದರಿಕೆಯೊಡ್ಡಿದ್ದಾನೆʼʼ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ ಆರೋಪಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ದೂರದಾರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.