ಕೊಪ್ಪಳ: ಸರ್ವ ಧರ್ಮೀಯರು ಸೇರಿ ಕಟ್ಟಿದ ಮಸೀದಿ ಉದ್ಘಾಟಿಸಿದ ಗವಿಮಠದ ಶ್ರೀಗಳು
► ಇನ್ನೊಬ್ಬರ ಮನಸ್ಸಿಗೆ ನೋವು ಮಾಡದೆ ಇರೋದು ಧರ್ಮ ಎಂದ ಸ್ವಾಮೀಜಿ
ಕೊಪ್ಪಳ: ಗವಿಮಠ ಸ್ವಾಮೀಜಿ ಅವರು ಕುಕನೂರು ತಾಲೂಕಿನ ಬಾನಾಪುರದಲ್ಲಿ ಶನಿವಾರ ಮಸೀದಿ ಉದ್ಘಾಟನೆ ಮಾಡಿದ್ದಾರೆ.
ಬಾನಾಪುರ ಗ್ರಾಮದಲ್ಲಿ ಕೇವಲ ಐದು ಮುಸ್ಲಿಂ ಕುಟುಂಬಗಳಿದ್ದು, ಎಲ್ಲಾ ಧರ್ಮದವರು ಸೇರಿ ಮಸೀದಿ ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಮಸೀದಿಯನ್ನು ಸ್ವಾಮೀಜಿಗಳು ಉದ್ಘಾಟನೆ ಮಾಡಿದ್ದಾರೆ.
ಮಸೀದಿ ಉದ್ಘಾಟನೆ ಬಳಿಕ ಮಾತನಾಡಿದ ಸ್ವಾಮೀಜಿಗಳು, ''ಸೂರ್ಯನ ಬೆಳಕಿಗೆ, ಉಸಿರಾಡುವ ಗಾಳಿಗೆ, ಮೆಟ್ಟಿ ನಿಲ್ಲುವ ಮಣ್ಣಿಗೆ, ಪ್ರಾಣಿ -ಪಕ್ಷಿಗಳಿಗೆ ಇಲ್ಲದ ಧರ್ಮ ಮನುಷ್ಯನಿಗೆ ಯಾಕೆ? ಸೌಹಾರ್ದಯುತವಾಗಿ ಬಾಳುವುದು ಧರ್ಮ. ಹಣ್ಣು ತಿಂದು ಸಿಪ್ಪೆ ಎಸೆಯುವುದು ಧರ್ಮವಲ್ಲ. ಎಸೆದಿರುವ ಸಿಪ್ಪೆ ಸ್ವಚ್ಛಗೊಳಿಸುವುದು ಧರ್ಮ. ಇನ್ನೊಬ್ಬರ ಮನಸ್ಸಿಗೆ ನೋವು ಮಾಡದೆ ಇರೋದು ಧರ್ಮ'' ಎಂದು ಹೇಳಿದರು.
ಗ್ರಾಮದಲ್ಲಿ ಕೇವಲ ಐದು ಮುಸ್ಲಿಂ ಕುಟುಂಬಗಳಿದ್ದು, ಇವರಿಗಾಗಿ ಸರ್ವ ಧರ್ಮೀಯರುರು ಸೇರಿ ಮಸೀದಿ ನಿರ್ಮಾಣ ಮಾಡಿರುವುದು ವಿಶೇಷ.
Next Story