ವಿರೋಧ ಪಕ್ಷವನ್ನೇ ವಿರೋಧಿಸುವ ನಾಯಕರನ್ನು ಕೊಡುತ್ತಿದೆ : ಕಾಂಗ್ರೆಸ್ ವ್ಯಂಗ್ಯ
ವಿರೋಧ ಪಕ್ಷದ ನಾಯಕನಾಗಿ ಆರ್ ಅಶೋಕ್ ಆಯ್ಕೆ
PHOTO:ಆರ್. ಅಶೋಕ್
ಬೆಂಗಳೂರು: ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ಬೆನ್ನಲ್ಲೇ ಕಾಂಗ್ರೆಸ್ , ರಾಜ್ಯಕ್ಕೆ ವಿರೋಧ ಪಕ್ಷದ ನಾಯಕನನ್ನು ಕೊಡಿ ಎಂದರೆ ವಿರೋಧ ಪಕ್ಷವನ್ನೇ ವಿರೋಧಿಸುವ ನಾಯಕರನ್ನು ಕೊಡುತ್ತಿದೆ ಎಂದು X ನಲ್ಲಿ ವ್ಯಂಗ್ಯವಾಡಿದೆ.
ಯಾವುದೇ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೂ ಕಿತ್ತಾಡದಷ್ಟು ಬಿಜೆಪಿಯ ಕಿತ್ತಾಟ ಜೋರಾಗಿದೆ. ಬಿಜೆಪಿ ನಾಯಕರು ಸೇರುವ ಜಾಗದಲ್ಲಿ ಕೋಲು, ದೊಣ್ಣೆ ಹಾಗೂ ಇತರೆ ಯಾವುದೇ ಆಯುಧವಾಗಿ ಬಳಸಬಹುದಾದ ವಸ್ತುಗಳನ್ನು ದೊರಕದಂತೆ ನೋಡಕೊಳ್ಳಬೇಕು. ಅಕಸ್ಮಾತ್ ಹೊಡೆದಾಡಿಕೊಂಡರೆ ಆಸ್ಪತ್ರೆಗಳಲ್ಲಿ ನೂಕುನುಗ್ಗಲಾಗುವ ಸಾಧ್ಯತೆ ಇರುತ್ತದೆ!
ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿರುವ ಬಿಜೆಪಿ ಅಭ್ಯರ್ಥಿ ಈಗ ವಿರೋಧ ಪಕ್ಷದ ನಾಯಕ! ವಿರೋಧ ಪಕ್ಷದ ನಾಯಕನಾಗಲು ಬೇಕಿರುವ ಜ್ಞಾನ, ಅರ್ಹತೆ ಯಾವುದೂ ಇಲ್ಲದ ನಕಲಿ ಸಾಮ್ರಾಟನೇ ಕೊನೆಯ ಆಯ್ಕೆಯಾಗಿದ್ದು ಬಿಜೆಪಿ ನಾಯಕರ ಬರಗಾಲ ಎದುರಿಸುತ್ತಿರುವುದಕ್ಕೆ ನಿದರ್ಶನ. ಎಂದು ಕಾಂಗ್ರೆಸ್ ಅಣಕಿಸಿದೆ.
ಬೆಂಗಳೂರಿನ ಐಟಿಸಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಆಧರಿಸಿ ಪಕ್ಷದ ವೀಕ್ಷಕರು ವಿಧಾನಸಭೆ ವಿಪಕ್ಷ ನಾಯಕರಾಗಿ ಪದ್ಮನಾಭನಗರ
ಕ್ಷೇತ್ರದ ಶಾಸಕರಾಗಿರುವ ಆರ್. ಅಶೋಕ್ ಅವರ ಹೆಸರರನ್ನು ಬಿಜೆಪಿ ಪ್ರಕಟಿಸಿತ್ತು.