ʼಅʼದಿಂದ ʼಅಃʼವರೆಗೆ ವಾಕ್ಯ ರಚಿಸಿ ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ ಗೂಗಲ್
Photo credit: Google
ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕೆ ಟೆಕ್ ದೈತ್ಯ ಗೂಗಲ್ ಶುಭಾಶಯ ಕೋರಿದೆ. ಸಾಮಾಜಿಕ ಜಾಲತಾಣದ ತನ್ನ ಅಧಿಕೃತ ಖಾತೆ ಮೂಲಕ ʼಗೂಗಲ್ ಸಂಸ್ಥೆʼ ರಾಜ್ಯೋತ್ಸವದ ಶುಭಾಶಯ ಕೋರಿದೆ.
“ಕನ್ನಡ ಸ್ವರಗಳೊಂದಿಗೆ ಶಾಲಾ ದಿನಗಳ ಸಿಹಿ ನೆನಪುಗಳನ್ನು ನೆನಪಿಸಿಕೊಳ್ಳೋಣ. ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ” ಎಂದು ಗೂಗಲ್ ಪೋಸ್ಟ್ ಮಾಡಿದೆ.
ಅಷ್ಟೇ ಅಲ್ಲದೆ, ಅ ದಿಂದ ಅಃ ದವರೆಗೂ ಒಂದೊಂದು ಅಕ್ಷರಕ್ಕೂ ವಾಕ್ಯ ರಚಿಸಿ ಕನ್ನಡ ಸ್ವರಗಳಿಗೆ ಗೂಗಲ್ ಗೌರವಿಸಿದೆ. ಗೂಗಲ್ ನ ಈ ಕ್ರಮವನ್ನು ಕನ್ನಡಿಗ ನೆಟ್ಟಿಗರು ಸ್ವಾಗತಿಸಿದ್ದು, ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾರೆ.
ಕನ್ನಡ ಅಕ್ಷರಗಳಿಗೆ ಗೂಗಲ್ ಕೊಟ್ಟಿರುವ ಸಾಲುಗಳ ವಿವರ ಇಲ್ಲಿದೆ.
ಅ - ಅಪ್ಪು
ಆ - ಆಕಾಶ ದೀಪವು ನೀನು
ಇ - ಇತಿಹಾಸ
ಈ - ಈ ಸಲ ಕಪ್ ನಮ್ದೇ
ಉ - ಉಪ್ಪು, ತುಪ್ಪ, ಅನ್ನ
ಊ - ಊಟ ಆಯ್ತಾ
ಋ - ಋತು
ಎ - ಎಲ್ಲಿ ಮಗ
ಏ - ಏನು ಕೊಡ ಏನು ಕೊಡವಾ
ಐ - ಐದು ಆರು ಬೇಳೆ ಸಾರು
ಒ - ಒಂದು ಕಪ್ ಫಿಲ್ಟರ್ ಕಾಫಿ
ಓ - ಓಡ್ರೋ ಓಡ್ರೋ ಓಡ್ರೋ
ಔ - ಔತಣ
ಅಂ - ಅಂಬಾರಿ ಆನೆ
ಅಃ