ಚೈತ್ರಾ ಕುಂದಾಪುರ ಪ್ರಕರಣ ಸೂಲಿಬೆಲೆಯಿಂದಾಗಿ ತಿಳಿಯಿತು: ಸಿ.ಟಿ. ರವಿ
ಚೈತ್ರಾ ಕುಂದಾಪುರ / ಸಿ.ಟಿ. ರವಿ / ಚಕ್ರವರ್ತಿ ಸೂಲಿಬೆಲೆ
ಚಿಕ್ಕಮಗಳೂರು: ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಮೊದಲು ನನಗೆ ಏನೂ ಗೊತ್ತಿರಲ್ಲಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಚಕ್ರವರ್ತಿ ಸೂಲಿಬೆಲೆ ಅವರು ನನ್ನ ಗಮನಕ್ಕೆ ತಂದರು. ಗೋವಿಂದ್ಬಾಬು ಅವರಿಗೆ ಟಿಕೆಟ್ ಕೊಡಿಸುತ್ತೇನೆಂದು ಮೋಸ ಮಾಡಿದ್ದಾರೆಂದು ತಿಳಿಸಿದ್ದರು ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಚಾರವನ್ನು ಗೋವಿಂದ ಪೂಜಾರಿಗೆ ತಿಳಿಸಿ ಕಾನೂನು ಕ್ರಮ ಕೈಗೊಳ್ಳಲು ಚಕ್ರವರ್ತಿ ಸೂಲಿಬೆಲೆಗೆ ತಿಳಿಸಿದ್ದೆ. ಹಣಕ್ಕಾಗಿ ಟಿಕೆಟ್ ಮಾರಿಕೊಳ್ಳುವ ಪದ್ಧತಿ ನಮ್ಮ ಪಕ್ಷದಲ್ಲಿ ಇಲ್ಲ. ಹಣಕ್ಕಾಗಿ ಟಿಕೆಟ್ ಕೊಡುವುದಿಲ್ಲ. ಪ್ರಕರಣದಲ್ಲಿ ಯಾರೇ ಇದ್ದರೂ ಸತ್ಯ ಹೊರ ಬರಲಿ ಎಂದು ಹೇಳಿದರು.
ಒಂದು ಪ್ರಕರಣ ಮುಚ್ಚಿ ಹೋದರೆ ಇಂತಹ ಹಲವು ಪ್ರಕರಣಗಳು ಆಗುತ್ತವೆ. ಹೀಗೆ ಮೋಸ ಮಾಡಿ ಟಿಕೆಟ್ ದಕ್ಕಿಸಿಕೊಂಡರೆ ಮತ್ತೆ ಹತ್ತು ಜನರಿಗೆ ಮೋಸ ಮಾಡುವ ಸ್ವಭಾವ ಬರುತ್ತದೆ. ಇಂತಹ ಪ್ರಕರಣಗಳು ಹೊರಗೆ ಬಂದರೆ ಉಳಿದವರಿಗೆ ಪಾಠ ಆಗುತ್ತದೆ ಎಂದರು.