ಪದವೀಧರ, ಶಿಕ್ಷಕರ ಕ್ಷೇತ್ರ: ಅಂತಿಮ ಮತದಾರರ ಪಟ್ಟಿ ಪ್ರಕಟ
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಡಿ.30ರ ಶನಿವಾರದಂದು ಪ್ರಕಟಿಸಲಾಗಿದ್ದು, ಮೂರು ಪದವೀಧರ ಕ್ಷೇತ್ರಗಳ ಹಾಗೂ ನಾಲ್ಕು ಶಿಕ್ಷಕರ ಕ್ಷೇತ್ರಗಳ ಮತದಾರರ ಅಂಕಿ-ಅಂಶಗಳನ್ನು ಒಳಗೊಂಡಿದೆ.
ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಒಟ್ಟು 1,50,184 ಮತದಾರರಿದ್ದು, ಅದರಲ್ಲಿ 95,104 ಪುರುಷ ಹಾಗೂ 55,061 ಮಹಿಳಾ ಮತದಾರರು ಇದ್ದಾರೆ. ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರದಲ್ಲಿ 74,218 ಮತದಾರರು, ಅದರಲ್ಲಿ 38,051 ಪುರುಷ ಹಾಗೂ 36,162 ಮಹಿಳಾ ಮತದಾರರು ಇದ್ದಾರೆ. ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 1,00,100 ಮತದಾರರಿದ್ದು, ಅದರಲ್ಲಿ 48,236 ಪುರುಷ ಹಾಗೂ 51,852 ಮಹಿಳಾ ಮತದಾರರು ಇದ್ದಾರೆ.
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 23,656 ಮತದಾರರಿದ್ದು, ಅದರಲ್ಲಿ 14,714 ಪುರುಷ ಹಾಗೂ 8,851 ಮಹಿಳಾ ಮತದಾರರಿದ್ದಾರೆ. ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 19,837 ಮತದಾರಿದ್ದು, ಅದರಲ್ಲಿ 9,042 ಪುರುಷ ಹಾಗೂ 10,795 ಮಹಿಳಾ ಮತದಾರರು ಇದ್ದಾರೆ. ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 18,475 ಮತದಾರರಿದ್ದು, ಅದರಲ್ಲಿ 10,386 ಪುರುಷ ಹಾಗೂ 8087 ಮಹಿಳಾ ಮತದಾರರು ಇದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 16,063 ಮತದಾರರಿದ್ದು, ಅದರಲ್ಲಿ 5,952 ಪುರುಷ ಹಾಗೂ 10,106 ಮಹಿಳಾ ಮತದಾರರು ಇದ್ದಾರೆ.
ಅರ್ಹ ಪದವೀಧರರು ಮತ್ತು ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳಿಗೆ ನಾಮ ನಿರ್ದೇಶನದ ಕೊನೆಯ ದಿನಾಂಕದ 10 ದಿನಗಳ ಮೊದಲು ನಡೆಯುವ ನಿರಂತರ ಪರಿಷ್ಕರಣೆಯ ಅವಧಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.