ಸಿ.ಎಂ. ಇಬ್ರಾಹಿಂ ಅವರ ಬೆಂಬಲಕ್ಕೆ ನಿಂತ ಎಚ್.ವಿಶ್ವನಾಥ್
ಮೈಸೂರು,ಅ.17: ರಾಜ್ಯ ರಾಜಕರಣದ ಇಂದಿನ ಪರಿಸ್ಥಿತಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತೆಗದುಕೊಂಡಿರುವ ನಿಲುವು ಸರಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಮರ್ಥಿಸಿಕೊಂಡರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ನಿಲುವು ಸರಿಯಾಗಿದೆ. ಅವರು ಜೆಡಿಎಸ್ ರಾಷ್ಟ್ರಾಧ್ಯಕ್ಷರಿಗೆ ವಿಧೇಯನಾಗಿರುತ್ತೇನೆ ಎಂದಿದ್ದಾರೆ. ಜಾತ್ಯಾತೀತವಾದವನ್ನು ಕೊಲೆ ಮಾಡಿ ಜಾತಿವಾದಿ ಕೋಮುವಾದಿಗಳ ಜೊತೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮದುವೆಯಾದರೆ ಒಪ್ಪಲು ಸಾಧ್ಯವೇ? ಹಾಗಾಗಿ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅವರಿಗೆ ಸಂಪೂರ್ಣ ಅಧಿಕಾರ ಇದ್ದು ಕುಮಾರಸ್ವಾಮಿ ಅವರ ಮೇಲೆ ಕ್ರಮ ಜರುಗಿಸಲಿದ್ದಾರೆ ಎಂದು ಹೇಳಿದರು.
ನಾನು ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದರೆ. ಜಾತ್ಯಾತೀತವಾದವನ್ನು ಬದಿಗೊತ್ತಿ ಮತೀಯವಾದಿಗಳ ಜೊತೆ ಕೈ ಜೋಡಿಸಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡುತ್ತಿದ್ದೆ. ಈಗ ಇಬ್ರಾಹಿಂ ಅವರಿಗೆ ಆ ಅಧಿಕಾರ ಇದ್ದು, ಅವರು ಕುಮಾರಸ್ವಾಮಿ ವಿರುದ್ಧ ಕ್ರಮ ಜರುಗಿಸಲಿದ್ದಾರೆ ಎಂದು ಹೇಳಿದರು.