ಹಾಸನ: ಹಡೇನಹಳ್ಳಿ ಹಾಲಿನ ಡೈರಿ ವಿಚಾರ; 970 ಲೀಟರ್ ಹಾಲನ್ನು ರಸ್ತೆಗೆ ಚೆಲ್ಲಿದ ಶೇರುದಾರರು
ಚನ್ನರಾಯಪಟ್ಟಣ: ತಾಲೂಕಿನ ಹಡೇನಹಳ್ಳಿ ಹಾಲಿನ ಡೈರಿ ವಿಷಯ ವ್ಯಾಜ್ಯ ತಾರಕಕ್ಕೆ ಏರಿದ್ದು, 970 ಲೀಟರ್ ಹಾಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಹಡೆನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಜಯಂತಿ ಎಂಬವರ ಬದಲಾವಣೆಯ ವಿಷಯವಾಗಿ ಆಡಳಿತ ಮಂಡಳಿಯಲ್ಲಿ ಗೊಂದಲ ಪ್ರಾರಂಭವಾಗಿದ್ದು, ಈ ವೇಳೆ ಮೇಲ್ವಿಚಾರಕಿ ಮಂಜುಳಾ ಹಾಲು ತೆಗೆದುಕೊಳ್ಳುವುದಿಲ್ಲ ಎಂದು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಬೇಸತ್ತ 189 ಮಂದಿ ಶೇರುದಾರರು 39 ಸಾವಿರ ಬೆಲೆ ಬಾಳುವ ಹಾಲನ್ನು ರಸ್ತೆಗೆ ಚೆಲ್ಲುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಹಡೆನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಆಶಾ, ನಿರ್ದೇಶಕರಾದ ತೇಜ, ಅನುಸೂಯ, ರೇಣುಕಮ್ಮ, ಸುಧಾ, ಚಂದ್ರಿಕಾ, ಅನಿತಾ, ಶಕುಂತಲಾ, ಲತಾ, ಪದ್ಮಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡು ಶಾಸಕ ಬಾಲಕೃಷ್ಣರಿಗೆ ಧಿಕ್ಕಾರ ಕೂಗಿದ್ದಾರೆ.
Next Story