ಹಾಸನ: ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿದ್ದ ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್; ತಪ್ಪಿದ ಭಾರೀ ದುರಂತ
ಹಾಸನ : ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ರೂಂನ ಪೂರ್ಣ ಹೊಗೆಮಯವಾಯಿತು. ಆದರೇ ಅಪಾಯದಿಂದ ನವಜಾತ ಶಿಶುಗಳು ಪ್ರಾಣಾಪಾಯದಿಂದ ಪಾರಾದ ಘಟನೆ ರವಿವಾರ ಮದ್ಯಾಹ್ನ ವರದಿಯಾಗಿದೆ.
ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಮಕ್ಕಳ ತೀವ್ರ ಚಿಕಿತ್ಸಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಕೋಣೆಯೊಳೆಗೆ ಹೊಗೆ ತುಂಬಿಕೊಂಡ ಹಿನ್ನೆಲೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆರೋಗ್ಯ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ಕಿಟಕಿ ಗಾಜುಗಳನ್ನು ಒಡೆದು ಐಸಿಯುನಲ್ಲಿದ್ದ 48 ನವಜಾತ ಶಿಶುಗಳನ್ನು ಬೇರೆಡೆಗೆ ತಕ್ಷಣದಲ್ಲಿ ಸ್ಥಳಾಂತರ ಮಾಡಿ ಸಮಯ ಪ್ರಜ್ಞೆ ಮೆರೆದಿದ್ದಾರೆ.
'ಐಸಿಯು ಕೋಣೆಯೊಳೆಗೆ ಹೊಗೆ ತುಂಬಿಕೊಂಡ ಹಿನ್ನೆಲೆ ಮಕ್ಕಳ ಪೋಷಕರು ಕೆಲ ಆತಂಕಗಂಡಿದ್ದರು, ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಹೊಗೆ ತುಂಬಿಕೊಳ್ಳದಂತೆ ಹೊಗೆ ಹೊರ ಹೋಗಲು ಸ್ಥಳಾವಕಾಶ ಮಾಡಿಕೊಟ್ಟರು. ಈಗ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದರೆ' ಎಂದು ಮಕ್ಕಳ ಐ.ಸಿ.ಯು ವಾರ್ಡ್ ಮುಖ್ಯಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಹಿಮ್ಸ್‌ನ ನಿರ್ದೇಶಕರಾದ ಬಿ.ಸಿ. ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಕೃಷ್ಣಮೂರ್ತಿ ಇತರರು ಭೇಟಿ ನೀಡಿ ಪರಿಶೀಲನೆ ಮಾಡಿ ಮಾಹಿತಿ ಪಡೆದರು.