ಕೊಪ್ಪದಲ್ಲಿ ಭಾರೀ ಮಳೆ: ವಿದ್ಯಾರ್ಥಿ ನಿಲಯದ ಆವರಣ ಗೋಡೆ ಕುಸಿತ
ಚಿಕ್ಕಮಗಳೂರು, ಜು.24: ಮಲೆನಾಡಿನಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯ ಆರ್ಭಟ ಇಂದು ಕೂಡಾ ಮುಂದುವರಿದಿದೆ. ಇದರಿಂದ ಹಲವೆಡೆ ಹಾನಿ ಸಂಭವಿಸಿರುವುದು ವರದಿಯಾಗಿದೆ.
ನಿರಂತರ ಮಳೆಗೆ ಕೊಪ್ಪ ತಾಲೂಕಿನ ಬಸರೀಕಟ್ಟೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಆವರಣ ಗೋಡೆ ಕುಸಿದಿದೆ. ಈ ಭಾಗದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದೆ.
Next Story