ಅನಂತಸ್ವಾಮಿ ಸಂಯೋಜಿಸಿದ್ದ ನಾಡಗೀತೆಯ ಧಾಟಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿನ್ನು ವಜಾ ಮಾಡಿದ ಹೈಕೋರ್ಟ್
ಬೆಂಗಳೂರು : ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳ ಕಾಲ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಎತ್ತಿಹಿಡಿದಿರುವ ಹೈಕೋರ್ಟ್, ಈ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿದೆ.
ಆ ಮೂಲಕ ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಕಡ್ಡಾಯಗೊಳಿಸಲು ಸರ್ಕಾರಕ್ಕೆ ಶಿಕ್ಷಣ ಕಾಯ್ದೆಯಡಿ ಅಧಿಕಾರವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಸರ್ಕಾರದ ಆದೇಶ ರದ್ದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕ ಸದಸ್ಯ ಪೀಠ ವಜಾಗೊಳಿದೆ. ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸುವ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಈ ಪ್ರಕರಣದ ವಿಚಾರವಾಗಿ ನಾನು ವಿವಿಧ ರಾಜ್ಯಗಳ ನಾಡಗೀತೆ ಹಾಗೂ ರಾಷ್ಟ್ರಗೀತೆಯ ಕುರಿತು ಅಧ್ಯಯನ ಮಾಡಿದ್ದೇನೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ರಾಷ್ಟ್ರಗೀತೆ ಹಾಡುವ ಕಾನೂನಿದೆ. ಜಪಾನ್ ದೇಶದಲ್ಲಿ ಬಾಯಿಮುಚ್ಚಿ ರಾಷ್ಟ್ರಗೀತೆ ಹೇಳುವಂತೆ ಕಾನೂನು ರೂಪಿಸಲಾಗಿದೆ ಎಂದರು.
ನಾಡಗೀತೆಯನ್ನು 1931 ರಚನೆ ಮಾಡಲಾಯಿತು, 1993 ಅಲ್ಲಿ ಅಂಗೀಕರಿಸಲಾಯಿತು. ಅರ್ಜಿಯಲ್ಲಿ ಸರ್ಕಾರಕ್ಕೆ ನಾಡಗೀತೆಯನ್ನು ಇದೆ ರೀತಿಯಲ್ಲಿ ಹೇಳಲು ಆದೇಶಿಸುವ ಅಧಿಕಾರವಿಲ್ಲ ಎಂದು ಅರ್ಜಿದಾರರು ಹೇಳುತ್ತಾರೆ. ಆದರೆ ಪೀಠ ಇದನ್ನು ಒಪ್ಪುವುದಿಲ್ಲ. 1983 ರ ಶಿಕ್ಷಣ ಕಾಯ್ದೆಯಡಿ ಅವರಿಗೆ ಆ ಅಧಿಕಾರವಿದೆ. ಹಾಗಾಗಿ ಸರ್ಕಾರ ಯೋಚನೆ ಮಾಡದೆ ಈ ರೀತಿ ಆದೇಶ ಮಾಡಿದೆ ಎಂದು ಹೇಳಲಾಗದು. ಇದೆಲ್ಲವನ್ನು ಪರಿಗಣಿಸಿ , ಪರಿಶೀಲಿಸಿ ನಂತರ ಈ ತೀರ್ಪು ನೀಡಲಾಗಿದ್ದು ಅದರ ಅನುಸಾರ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಆದೇಶಿಸಿದೆ.