ಚಾಕುವಿನಿಂದ ಇರಿದು ಯುವಕನ ಹತ್ಯೆ
ಅಸ್ಲಂ ಮಖಾಂದಾರ್
ಹುಬ್ಬಳ್ಳಿ: ಚಾಕುವಿನಿಂದ ಇರಿದು ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ಮಂಗಳವಾರ ರಾತ್ರಿ ವರದಿಯಾಗಿದೆ.
ಅಸ್ಲಂ ಮಖಾಂದಾರ್ (30) ಕೊಲೆಗೀಡಾದ ಯುವಕ ಎಂದು ತಿಳಿದು ಬಂದಿದೆ.
ಮಂಜುನಾಥ್ ಜೋನಲ್ಲಿ ಎಂಬಾತ ಹಲ್ಲೆ ನಡೆಸಿ ಅಸ್ಲಂ ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಸ್ಲಂನನ್ನು ತಕ್ಷಣ ಆತನ ಸ್ನೇಹಿತರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿಸ್ಥೆ ಫಲಿಸದೇ ಅಸ್ಲಂ ಕೊನೆಯುಸಿರೆಳೆದಿದ್ದಾನೆನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಕೇಶ್ವಪೂರ್ ಠಾಣೆ ಹಾಗೂ ವಿದ್ಯಾನಗರ ಪೊಲೀಸರು ಕೊಲೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಿಮ್ಸ್ ಆಸ್ಪತ್ರೆಗೆ ಎಸಿಪಿ ಬಾಳಪ್ಪ ನಂದಗನ್ವಿ, ಕೇಶ್ವಪೂರ್ ಠಾಣೆ ಪಿಐ ಸಾತೆನಲ್ಲಿ, ಪಿ ಎಸ್ ಐ , ಸದಾಶಿವ ಕನಟ್ಟಿ, ವಿದ್ಯಾನಗರ ಠಾಣೆಯ ಪಿ ಎಸ್ ಐ ಶ್ರೀಮಂತ ಅವರು ಬೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
Next Story