ʼಗೃಹಲಕ್ಷ್ಮಿʼ ಯೋಜನೆ ಜಾರಿ: ಮಹಿಳೆಯರ ಖಾತೆಗೆ ಬಂತು ಹಣ ಜಮಾವಣೆ ಕುರಿತು ಮೆಸೆಜ್..!
ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಐದು ಗ್ಯಾರಂಟಿ ಯೋಜನೆಗಳ ನಾಲ್ಕನೇ ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಬುಧವಾರ ರಾಜ್ಯಸಭಾ ವಿರೋಧಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಹಲವು ಮನೆಯ ಒಡತಿಯರಿಗೆ ಗೃಹಲಕ್ಷ್ಮಿ ಯೋಜನೆಯ ಕುರಿತು ಮೊಬೈಲ್ ಗಳಿಗೆ ಎಸ್ಸೆಮ್ಮೆಸ್ ಬರಲು ಆರಂಭಿಸಿದೆ.
ಎಸ್ಸೆಮ್ಮೆಸ್ ನಲ್ಲೇನಿದೆ?
ʼʼಅಭಿನಂದನೆಗಳು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಸಂಖ್ಯೆ GL-220700**** ಅನ್ನು ನಮೂದಿಸಲಾಗಿದೆ. ಆಗಸ್ಟ್ (2023) ರಿಂದ 2000 ಮೊತ್ತವನ್ನು ನೋಂದಾಯಿಸಿಕೊಂಡಿದ್ದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದುʼʼ ಎಂದು ಎಸ್ಸೆಮ್ಮೆಸ್ ನಲ್ಲಿ ಇದೆ.
ದ.ಕ.ದಲ್ಲಿ 2,38,352 ‘ಗೃಹಲಕ್ಷ್ಮಿ’ಯರಿಗೆ 47,67,04,000 ರೂ. ಪಾವತಿ
ದ.ಕ. ಜಿಲ್ಲೆಯಲ್ಲಿ ಈವರೆಗೆ 3,15,726 ಮಂದಿ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಬುಧವಾರ 2,38,352 ಫಲಾನುಭವಿಗಳಿಗೆ 47,67,04,000 ರೂ. ಪಾವತಿಯಾಗಿದೆ. ಉಳಕೆ 77374 ಫಲಾನುಭವಿಗಳ ಮಾಹಿತಿ ಸೇವಾಸಿಂಧುವಿನಲ್ಲಿ ಅಪ್ಲೋಡ್ ಆಗಬೇಕಾಗಿದೆ.