ಬಿಜೆಪಿ ಜೊತೆ ಸೇರಿ ಜೆಡಿಎಸ್ ಜಾತ್ಯಾತೀತ ತತ್ವವನ್ನು ಕಳೆದುಕೊಂಡಿದೆ: ಪ್ರಿಯಾಂಕ್ ಖರ್ಗೆ
ಬೆಳಗಾವಿ: ಲೋಕಸಭೆ ಚುನಾವಣೆಗಿಂತ ಮುಂಚೆ ಜೆಡಿಎಸ್ ಅಸ್ತಿತ್ವ ಏನಾಗುತ್ತೆ ಅನ್ನುವುದರ ಬಗ್ಗೆ ಕಾಳಜಿವಹಿಸಿದರೆ ಒಳ್ಳೆಯದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಜೆಡಿಎಸ್ ಈಗಾಗಲೇ ಅಸ್ತಿತ್ವ ಕಳೆದುಕೊಂಡಿದೆ. ದಳ ಒಡೆದು ಹೋಗಿದೆ. ಕಾಲ್ಪನಿಕವಾಗಿ ಸುಮ್ಮನೆ ಸುದ್ದಿಯಲ್ಲಿ ಇರೋಕೆ ಜೆಡಿಎಸ್ ಈ ರೀತಿ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಬಿಜೆಪಿ ಜೊತೆ ಸೇರಿ ಜಾತ್ಯಾತೀತ ತತ್ವವನ್ನು ಜೆಡಿಎಸ್ ಕಳೆದುಕೊಂಡಿದೆ. ಜನರು ಸಹ ಅವರ ಜೊತೆ ಇಲ್ಲ. ಲೋಕಸಭಾ ಚುನಾವಣೆ ವೇಳೆಗೆ ಜೆಡಿಎಸ್ ನಲ್ಲಿ 5 ಜನ ಶಾಸಕರು ಉಳಿಯುತ್ತಾರೆ ಎಂದರು.
Next Story