ಕಲಬುರಗಿ: ಪಿಎಸ್ ಐ ಸರ್ವಿಸ್ ರಿವಾಲ್ವರ್ ಕಸಿದು ಪರಾರಿಯಾದ ಕಳ್ಳತನ ಪ್ರಕರಣದ ಆರೋಪಿ!
ಸಾಂದರ್ಭಿಕ ಚಿತ್ರ
ಕಲಬುರಗಿ: ಕಳ್ಳತನ ಪ್ರಕರಣದ ಆರೋಪಿಯೋರ್ವ ಪೊಲೀಸ್ ಸಬ್ ಇನ್ಸ್ಸ್ಪೆಕ್ಟರ್ನ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಪರಾರಿಯಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ವರದಿಯಾಗಿದೆ.
ಆರೋಪಿ ಖಾಜಾ ಎಂಬಾತನನ್ನು ಬಂಧಿಸಲು ಸಿಸಿಬಿ ಪೊಲೀಸರು ಬೆಂಗಳೂರಿನಿಂದ ಅಫಜಲಪುರಕ್ಕೆ ಆಗಮಿಸಿದ್ದರು. ಆತನನ್ನು ಬಂಧಿಸುವ ವೇಳೆ ಅಫಜಲಪುರ ಪಿಎಸ್ಐ ಭೀಮರಾಯ್ ಬಂಕಲಿ ಅವರ ಸರ್ವಿಸ್ ರಿವಾಲ್ವರ್ ಕಸಿದು ಪರಾರಿಯಾಗಿದ್ದಾನೆನ್ನಲಾಗಿದೆ.
ಖಾಜಾ ಬಳ್ಳೂರ್ಗಿ ಮೂಲದವನಾಗಿದ್ದು, ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿದಂತೆ ವಿವಿಧೆಡೆ 20 ಕ್ಕೂ ಅಧಿಕ ಕಳ್ಳತನ ಪ್ರಕರಣ ಈತನ ಮೇಲಿತ್ತು. ಈತನನ್ನ ಹಿಡಿಯಲೆಂದು ಪೊಲೀಸರು ಯೋಜನೆ ಹಾಕಿದ್ದರು. ಆದರೆ ಖಾಜಾ ಬಂಧನದ ವೇಳೆ ಸರ್ವಿಸ್ ರಿವಾಲ್ವರ್ ಕಸಿದು ಪರಾರಿಯಾಗಿದ್ದಾನೆ.
ಇನ್ನು ಅಫಜಲಪುರ ಠಾಣೆಗೆ ಕಲಬುರಗಿ ಎಸ್ಪಿ ಇಶಾ ಪಂತ್ ಭೇಟಿ ನೀಡಿ ಘಟನೆಯ ಬಗ್ಗೆ ವಿಚಾರಿಸಿದ್ದಾರೆ.
Next Story