ಮಾರಾಟ ತೆರಿಗೆ ಹೆಚ್ಚಳ | ಕರ್ನಾಟಕದಲ್ಲಿ ಡೀಸೆಲ್ 2 ರೂ. ದುಬಾರಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯ ಸರಕಾರವು ಡೀಸೆಲ್ ಮೇಲೆ ವಿಧಿಸಿದ್ದ ಮಾರಾಟ ತೆರಿಗೆ ದರವನ್ನು ಶೇ.2.73ರಷ್ಟು ಏರಿಕೆ ಮಾಡಿದ್ದು, ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಪ್ರತೀ ಲೀಟರ್ಗೆ 91.02 ರೂ. ಆಗಿದೆ.
2024ರಲ್ಲಿ ಡೀಸೆಲ್ ಮೇಲೆ ವಿಧಿಸಿದ್ದ ಮಾರಾಟ ತೆರಿಗೆ ದರವನ್ನು ಶೇ.18.44ರಷ್ಟು ಏರಿಕೆ ಮಾಡಲಾಗಿತ್ತು. ಆಗ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಪ್ರತೀ ಲೀಟರ್ಗೆ 89.02 ರೂ. ಆಗಿತ್ತು. ಈಗ ತೆರಿಗೆ ದರವನ್ನು ಶೇ.21.17ಕ್ಕೆ ಏರಿಕೆ ಮಾಡಿದ್ದು, ಪರಿಷ್ಕೃತ ದರ ಎ.1ರಿಂದಲೇ ಜಾರಿಗೆ ಬಂದಿದೆ.
ಪ್ರಸಕ್ತ ಪ್ರತೀ ಲೀಟರ್ನ ಡೀಸೆಲ್ ಬೆಲೆ ಹೊಸೂರಿನಲ್ಲಿ 94.42 ರೂ., ಕಾಸರಗೋಡು 95.66 ರೂ., ಅನಂತಪುರ 97.35 ರೂ., ಹೈದರಾಬಾದ್ 95.70 ರೂ., ಕಾಗಲ್ 91.07 ರೂ.ಗಳಿವೆ. ರಾಜ್ಯದಲ್ಲಿ ಪರಿಷ್ಕೃತ ಮಾರಾಟ ದರವು ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇರುತ್ತದೆ ಎಂದು ರಾಜ್ಯ ಸರಕಾರ ಪ್ರಕಟನೆ ಹೊರಡಿಸಿದೆ.
Next Story