ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
ಜಾಣಗೆರೆ ವೆಂಕಟರಾಮಯ್ಯಗೆ ʼಗೌರವ ಪ್ರಶಸ್ತಿʼ, ಜಿ.ಎನ್.ಮೋಹನ್‌ಗೆ ʼಸಾಹಿತ್ಯಶ್ರೀʼ ಪ್ರಶಸ್ತಿ

ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ʼವಾರ್ಷಿಕ ಗೌರವ ಪ್ರಶಸ್ತಿʼ ಮತ್ತು ʼಸಾಹಿತ್ಯಶ್ರೀ ಪ್ರಶಸ್ತಿʼಗಳು ಪ್ರಕಟಗೊಂಡಿದ್ದು, ಐವರು ವಾರ್ಷಿಕ ಗೌರವ ಪ್ರಶಸ್ತಿ, 10 ಮಂದಿ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಐವರು ಹಿರಿಯ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೆ ವರ್ಷದ ಗೌರವ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 7ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಿದೆ.
2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು : ಡಾ.ಸಿ.ವೀರಣ್ - ಬೆಂಗಳೂರು, ಡಾ.ಶ್ರೀರಾಮ ಇಟ್ಟಣ್ಣವರ- ಬಾಗಲಕೋಟೆ, ಜಾಣಗೆರೆ ವೆಂಕಟರಾಮಯ್ಯ–ತುಮಕೂರು, ಎ.ಎಂ.ಮದರಿ –ಕೊಪ್ಪಳ, ಡಾ.ಸಬಿಹಾ ಭೂಮಿಗೌಡ- ಮಂಗಳೂರು ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಾರ್ಷಿಕ ಗೌರವ ಪ್ರಶಸ್ತಿಯು 50 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಿದೆ.
2023ನೇ ವರ್ಷದ 'ಸಾಹಿತ್ಯಶ್ರೀ' ಪ್ರಶಸ್ತಿ ಪುರಸ್ಕೃತರು : ಡಾ.ಎಂ.ಎಸ್.ಶೇಖರ್ - ಮೈಸೂರು, ಜಿ.ಎನ್.ಮೋಹನ್, ಬೆಂಗಳೂರು, ಡಾ.ಟಿ.ಎಸ್.ವಿವೇಕಾನಂದ – ತುಮಕೂರು, ಡಾ.ಜಯಶ್ರೀ ಕಂಬಾರ – ಬೆಳಗಾವಿ, ಪ್ರೊ.ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ – ಧಾರವಾಡ, ಡಾ.ಬಾಲಗುರುಮೂರ್ತಿ-ಕೋಲಾರ, ಪ್ರೊ.ಶಿವಗಂಗಾ ರುಮ್ಮ – ಕಲಬುರಗಿ, ಡಾ.ರೀಟಾ ರೀನಿ - ಬೆಂಗಳೂರು, ಡಾ.ಕಲೀಮ್ ಉಲ್ಲಾ- ಶಿವಮೊಗ್ಗ, ಡಾ.ವೆಂಕಟಗಿರಿ ದಳವಾಯಿ–ಬಳ್ಳಾರಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
'ಸಾಹಿತ್ಯಶ್ರೀ' ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.
2022ನೇ ವರ್ಷದ ಪುಸ್ತಕ ಬಹುಮಾನ ವಿಜೇತರು: ರಾಮು ಮೈಸೂರು-ವಿಷ್ಣು ಕ್ರಾಂತಿ ಮತ್ತು ಇತರ ಪದ್ಯಗಳು, ರೇವಣ್ಣ ಸಿದ್ದಪ್ಪ ಜಿ. ಆರ್.-ಬಾಳ ನೌಕೆಗೆ ಬೆಳಕಿನ ದೀಪ, ಸುಮಂಗಲಾ ಎಸ್. ಮಮ್ಮಿಗಟ್ಟಿ-ಬಯಲ ಬೆರಗು, ದಯಾನಂದ-ಬುದ್ಧನ ಕಿವಿ, ಬಿದರಹಳ್ಳಿ ನರಸಿಂಹಮೂರ್ತಿ-ಮಾಯಾದಂಡ, ಶ್ರೀಹರ್ಷ ಸಾಲಿಮಠ-ಡಾರ್ಕ್ ಹೂಮರ್, ಚಿಂತಾಮಣಿ ಕೊಡ್ಲೆಕೆರ-ಗಿಂಡಿಯಲ್ಲಿ ಗಂಗೆ, ಪಿ.ರಾಮಯ್ಯ-ನಾನು ಹಿಂದೂ ರಾಮಯ್ಯ ಅರವತ್ತು ವರ್ಷಗಳ ಅನುಭವ ಕಥನ, ಡಾ.ಚನ್ನಪ್ಪ ಕಟ್ಟಿ-ಕುಯಿಲು, ಸಂತೆಬೆನ್ನೂರು ಫೈಜ್ಯಟ್ರಾಜ್-ಮಗಳಿಗೆ ಹೇಳಿದ ಕಥೆಗಳು, ಡಾ.ಸುಕನ್ಯಾ ಸೊನಗಹಳ್ಳಿ-ಬೆಳೆ ರೋಗಗಳು, ಕೀಟಗಳು ಮತ್ತು ಅವುಗಳ ನಿರ್ವಹಣೆ, ಹೆಚ್.ಎನ್. ನಾಗಮೋಹನ ದಾಸ್-ಸಂವಿಧಾನ ಮತ್ತು ವಚನಗಳು, ಡಾ. ಶೈಲಜಾ ಇಂ.ಹಿರೇಮಠ-ನಿರೂಪಣೆಯಾಚೆಗೆ, ಅನಿಲ ಸಿ.ಹೊಸಮನಿ-ಡಾ. ಅಂಬೇಡ್ಕರ್ ಸಹವಾಸದಲ್ಲಿ, ರಾಜಾರಾಂ ತಲ್ಲೂರು-ಕರಿಡಬ್ಬಿ, ಪಿ.ವಿ.ನಂಜರಾಜ ಅರಸ್-ಟೀಪೂ ಮಾನ್ಯತೆ ಸಿಗದ ಸುಲ್ತಾನ್ ಅಂದು-ಇಂದು, ಮಲ್ಲಿಕಾರ್ಜುನ ಶೆಲ್ಲಿಕೇರಿ-ದೀಡೆಕರೆ ಜಮೀನು,ಪೈಯನೂರು ಕುನ್ದ್ರಿರಾಮನ್ ಮತ್ತು ಮೋಹನ ಕುಂಟರ್-ಚಾರು ವಸಂತ
2022ನೇ ವರ್ಷದ ಅಕಾಡೆಮಿಯ ದತ್ತಿ ಬಹುಮಾನ ಪುರಸ್ಕೃತರು: ಎಚ್.ಎಸ್.ಅನುಪಮಾ, ಫಾತಿಮಾ ರಲಿಯಾ, ಶಾರದಾ ವಿ. ಮೂರ್ತಿ, ವಿನಯಾ ನಂದಿಹಾಳ, ವಿಕ್ರಮ ವಿಸಾಜಿ, ಸುಶ್ರುತ್ ಜೆ.ಆರ್., ಅಕ್ಷತಾ ಕೃಷ್ಣಮೂರ್ತಿ, ಕೃಷ್ಣಮೂರ್ತಿ ಚಂದರ್, ಡಾ. ಶ್ರೀಧರ ಹೆಗಡೆ ಭದ್ರನ್ ಅವರು ದತ್ತಿ ಬಹುಮಾನಕ್ಕೆ ಭಾಜನರಾಗಿದ್ದಾರೆ.