ಕರ್ನಾಟಕಕ್ಕೆ ಬಹುಮತ ಸಿಕ್ಕಿದ್ದು ಇಡೀ ದೇಶಕ್ಕೆ ಹೊಸ ಸಂದೇಶ: ಡಿ.ಕೆ ಶಿವಕುಮಾರ್
facebook.com/DKShivakumar.official
ಬೆಂಗಳೂರು: ದೇಶದ ಎಲ್ಲಾ ವಿರೋಧ ಪಕ್ಷಗಳು ಒಂದಾಗಿವೆ. ಮುಂದಿನ ಭಾರತ ಹೇಗೆ ಇರಬೇಕು ಅನ್ನೋದನ್ನ ಈ ಸಭೆಯಲ್ಲಿ ರೂಪುರೇಷೆಗಳನ್ನು ಮಾಡಲಾಗುತ್ತದೆ. 2024 ರ ಲೋಕಾಸಭಾ ಚುನಾವಣೆಯಲ್ಲಿ ನಿಚ್ಚಳ ಬಹುಮತ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ದೊಡ್ಡ ಪ್ರಾರಂಭ. ಎಲ್ಲ ವಿರೋಧ ಪಕ್ಷಗಳು ಒಂದಾಗಿರುವುದು ಯಶಸ್ವಿ ದಿನ. ಕೆಪಿಸಿಸಿ ಪರವಾಗಿ, ಸಿಎಂ ಪರವಾಗಿ ನಾವು ಎಐಸಿಸಿಗೆ ಹಾಗೂ ಎಲ್ಲ ಪಕ್ಷಗಳ ನಾಯಕರಿಗೆ ಆತಿಥ್ಯ ನೀಡುತ್ತಿದ್ದೇವೆ. ಸಭೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗುತ್ತಿರುವುದು ನಮಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು.
ಕರ್ನಾಟಕದಲ್ಲಿ ಯಡಿಯೂರಪ್ಪ ಆಪರೇಷನ್ ಕಮಲದ ಮೂಲಕ ಸರ್ಕಾರ ನಡೆಸಿದರು. ಆದರೆ, ಈಗ ಅವರ ಪರಿಸ್ಥಿತಿ ಏನಾಯ್ತು? ಮಹಾರಾಷ್ಟ್ರದಲ್ಲೂ ಕೂಡಾ ಅದೇ ಆಗಲಿದೆ. ಕರ್ನಾಟಕಕ್ಕೆ ಬಹುಮತ ಸಿಕ್ಕಿದ್ದು ಇಡೀ ದೇಶಕ್ಕೆ ಹೊಸ ಸಂದೇಶ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.
Next Story