ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾದರೆ ಸಂತೋಷ ಪಡುವವರಲ್ಲಿ ನಾನು ಮೊದಲಿಗ: ಕೆ.ಎನ್.ರಾಜಣ್ಣ
"ಹೈಕಮಾಂಡ್ನಿಂದ ಆದ ಗೊಂದಲವನ್ನು ಅವರೇ ನಿವಾರಿಸಲಿ"
ಕೆ.ಎನ್.ರಾಜಣ್ಣ
ಬೆಂಗಳೂರು: ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ಹಿರಿಯ ಪ್ರಭಾವಿ ನಾಯಕರು. ಒಂದು ವೇಳೆ ಅವರು ಕೆಪಿಸಿಸಿ ಅಧ್ಯಕ್ಷರಾದರೆ, ಸಂತೋಷ ಪಡುವವರಲ್ಲಿ ನಾನು ಮೊದಲಿಗ. ಅವರು ಜನಪರ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಸಿಗುತ್ತಾರೆ, ಎಲ್ಲರಿಗೂ ಗೌರವ ಕೊಡುತ್ತಾರೆ. ಅವರು ಅಧ್ಯಕ್ಷರಾದರೆ ನಾನು ಸ್ವಾಗತ ಮಾಡುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದರ ಕುರಿತು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಸತೀಶ್ ಜಾರಕಿಹೊಳಿ ಅವರು ಹೇಳಿದ್ದರಲ್ಲಿ ತಪ್ಪು ಹುಡುಕಬಾರದು. ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನಾಯಕರೇ ಗೊಂದಲವನ್ನುಂಟು ಮಾಡಿದ್ದು, ಅವರೇ ಶೀಘ್ರದಲ್ಲೇ ಗೊಂದಲ ನಿವಾರಿಸಲಿ ಎಂದರು.
ಲೋಕಸಭಾ ಚುನಾವಣೆ ಆದಮೇಲೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದಾಗಿ ಹೈಕಮಾಂಡ್ ಹೇಳಿತ್ತು. ಲೋಕಸಭಾ ಚುನಾವಣೆ ನಡೆದು 6 ತಿಂಗಳು ಕಳೆದಿದೆ. ವಿಧಾನಸಭಾ ಚುನಾವಣೆವರೆಗೂ ಡಿ.ಕೆ. ಶಿವಕುಮಾರ್ ಅವರೇ, ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ಮುಂದುವರೆಯಲಿ. ಆದರೆ, ಈ ಬಗ್ಗೆ ಸ್ಪಷ್ಟವಾಗಿ ಹೈಕಮಾಂಡ್ ತಿಳಿಸಬೇಕು ಎಂದು ಕೆ.ಎನ್.ರಾಜಣ್ಣ ಮನವಿ ಮಾಡಿದರು.