ಕೋಲಾರ | ಕೂಲಿ ಕೇಳಿದ್ದಕ್ಕೆ ದಲಿತ ಯುವಕನಿಗೆ ಜಾತಿ ನಿಂದನೆ, ಮಾರಣಾಂತಿಕ ಹಲ್ಲೆ ಪ್ರಕರಣ: ಇಬ್ಬರ ಬಂಧನ, ಓರ್ವ ಪರಾರಿ
ಕೋಲಾರ, ಅ.20: ಗಾರೆ ಕೆಲಸ ಮಾಡಿ ಕೂಲಿ ಹಣ ಕೇಳಿದಕ್ಕೆ ದಲಿತ ಯುವಕನಿಗೆ ಜಾತಿ ನಿಂದನೆ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಾದಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ವರದಿಯಾಗಿದೆ.
ಹಲ್ಲೆಗೊಳಗಾದವನನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಾದಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅಮರೇಶ್ ಎಂದು ತಿಳಿದುಬಂದಿದೆ. ಈತನನ್ನು ಬಂಗಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಲ್ಲೆಮಾಡಿದ ಆರೋಪಿಗಳನ್ನು ದೊಡ್ಡವಲಗಮಾದಿ ಗ್ರಾಮದ ಸವರ್ಣೀಯ ರಜಪೂತ ಸಮುದಾಯದ ಜಗದೀಶ್ ಸಿಂಗ್, ರವೀಂದ್ರ ಸಿಂಗ್ ಮತ್ತು ಸತೀಶ್ ಸಿಂಗ್ ಎಂದು ಗುರುತಿಸಲಾಗಿದೆ.
ಜಗದೀಶ್ ಸಿಂಗ್ ಎಂಬಾತ ತನ್ನ ಮನೆ ನಿರ್ಮಾಣದ ಕೆಲಸಕ್ಕೆ ಅಮರೇಶ್‌ನನ್ನು ಕರೆಸಿ ಕೆಲಸ ಮಾಡಿಸಿಕೊಂಡ ನಂತರ ಕೂಲಿ ಕೊಟ್ಟಿರಲಿಲ್ಲ ಎನ್ನಲಾಗಿದೆ. ಅ.17ರಂದು ಗ್ರಾಮದಲ್ಲಿ ಕೂಲಿ ಹಣವನ್ನು ಕೊಡಿ ಎಂದು ಕೇಳಿದಕ್ಕೆ, ಜಾತಿ ನಿಂದನೆ ಮಾಡಿದಲ್ಲದೇ ಬೆದರಿಕೆ ಹಾಕಿದಲ್ಲದೇ ಜಗದೀಶ್ ಜೊತೆಯಲ್ಲಿದ್ದ ರವೀಂದ್ರ ಸಿಂಗ್ ಮತ್ತು ಸತೀಶ್ ಸಿಂಗ್ ಸೇರಿ ಮೂವರೂ ಕೈಕಾಲುಗಳನ್ನು ಕಟ್ಟಿ ಹಣ ಕೇಳುತ್ತೀಯಾ ಇನ್ನೊಮ್ಮೆ ಕೇಳಿದರೆ ಕಳ್ಳತನ ಮಾಡಿದ್ದೀಯ ಎಂದು ದೂರು ನೀಡುವುದಾಗಿ ಹೆದರಿಸಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಅಮರೇಶ್ ಕುಟುಂಬದವರು ಆರೋಪಿಸಿದ್ದಾರೆ.
ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ವಿಷಯ ತಿಳಿದು ಗ್ರಾಮ ಪಂಚಾಯತ್ ಸದಸ್ಯ ಮುನಿರಾಜು, ರಾಮಕೃಷ್ಣ, ವೆಂಕಟೇಶ್, ಉಮೇಶ್ ಮತ್ತಿತರರು ಸ್ಥಳಕ್ಕೆ ದಾವಿಸಿ, ಹಲ್ಲೆಗೊಳಗಾಗಿ ತೀವ್ರ ನಿತ್ರಾಣಗೊಂಡಿದ್ದ ಗಾಯಾಳುವನ್ನು ಬಂಗಾರಪೇಟೆ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಎಂ.ಎಲ್.ಸಿ.ಯಾದ ಕೂಡಲೇ ಬಂಗಾರಪೇಟೆ ಪೊಲೀಸರು ಆಗಮಿಸಿ ಗಾಯಾಳುವಿನ ಹೇಳಿಕೆ ಪಡೆದು, ಪರಿಶಿಷ್ಟ ಜಾತಿ, ಪಂಗಡಗಳ ಮೇಲೆ ದೌರ್ಜನ್ಯ ಕಾಯ್ದೆ-2015 ಅಡಿ ಪ್ರಕರಣ ದಾಖಲಿಸಿದ್ದಾರೆ.
ಪ್ರತಿ ದೂರು ದಾಖಲು
ಇತ್ತ ಅಟ್ರಾಸಿಟಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರೋಪಿಗಳ ಕಡೆಯಿಂದ ಪ್ರತಿ ದೂರು ದಾಖಲಿಸಿದ್ದಾರೆ. ಅಟ್ರಾಸಿಟಿ ಪ್ರಕರಣದಲ್ಲಿ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂ‘ನಕ್ಕೆ ಒಪ್ಪಿಸಿದ್ದಾರೆ ಇನ್ನೋರ್ವ ತಲೆ ಮರೆಸಿಕೊಂಡಿದ್ದಾನೆ. ತನಿಖಾಧಿಕಾರಿ ಡಿವೈಎಸ್ಪಿ ಗ್ರಾಮಕ್ಕೆ ‘ೇಟಿ ನೀಡಿ ಮಹಜರು ನಡೆಸಿದ್ದಾರೆ.
ದೊಡ್ಡವಲಗಮಾದಿ ಗ್ರಾಮದ ಇತಿಹಾಸದಲ್ಲೇ ಇದೇ ಮೊದಲ ಜಾತಿ ದೌರ್ಜನ್ಯ ಪ್ರಕರಣವೆಂದು ಎನ್ನಲಾಗಿದೆ.
ಅ.25ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ಘಟನೆ ನಡೆದು ಮೂರು ದಿನಗಳಾದರೂ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ, ತಹಶೀಲ್ದಾರ್, ಜಿಲ್ಲಾ ಜಂಟಿ ನಿರ್ದೇಶಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಯಾರೊಬ್ಬರೂ ಹಲ್ಲೆಗೊಳಗಾದ ಸಂತ್ರಸ್ತ ಮತ್ತು ಅವರ ಕುಟುಂಬ ವರ್ಗದವರನ್ನು ‘ೇಟಿ ಮಾಡಿ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡದೆ, ಸಂತ್ರಸ್ತರಿಗೆ ಪರಿಹಾರವನ್ನೂ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಕನಿಷ್ಠ ಗ್ರಾಮದಲ್ಲಿ ‘ೈರ್ಯ ತುಂಬುವ ‘ರವಸೆಯ ಸ‘ೆಯನ್ನೂ ನಡೆಸಿಲ್ಲ. ತಾಲೂಕು ಆಡಳಿತದ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅ.25ರಂದು ದಲಿತ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಮತ್ತು ಜನಾಧಿಕಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹೂವರಸನಹಳ್ಳಿ ರಾಜಪ್ಪ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ಗ್ರಾಮದಲ್ಲಿ ಸುಮಾರು 20 ಸಮುದಾಯಗಳು ಇದ್ದು, ಎಲ್ಲ ಸಮುದಾಯಗಳು ಪರಸ್ಪರ ಒಗ್ಗಟ್ಟಿನಿಂದ ಸಹಬಾಳ್ವೆ ನಡೆಸಿಕೊಂಡು ಬಂದಿದ್ದೇವೆ. ಗ್ರಾಮದ ಇತಿಹಾಸದಲ್ಲಿ ಇಲ್ಲಿಯ ತನಕ ಒಂದೇ ಒಂದು ಅಟ್ರಾಸಿಟಿ ಪ್ರಕರಣ ದಾಖಲಾಗಿಲ್ಲ. ಜಾತಿ ದೌರ್ಜನ್ಯಗಳೂ ಯಾವುದೂ ನಡೆದಿಲ್ಲ. ಇದೇ ಮೊದಲ ಬಾರಿಗೆ ಜಾತಿ ಹೆಸರಿನಲ್ಲಿ ಪ್ರಕರಣ ದಾಖಲಾಗಿರುವುದು ಗ್ರಾಮಸ್ಥರಿಗೆ ಹಾಗೂ ವೈಯಕ್ತಿಕವಾಗಿ ಮುಜಗರ ತಂದಿದೆ. ಗ್ರಾಮದಲ್ಲಿ ಎಲ್ಲ ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಮುಂದೆ ಈ ರೀತಿಯ ಘಟನೆಗಳಿಗೆ ಅವಕಾಶವಾಗದಂತೆ ‘ರವಸೆಯನ್ನು ಅಧಿಕಾರಿಗಳು ನೀಡಬೇಕು. ಇದರಿಂದ ಸಣ್ಣ ಸಣ್ಣ ಸಮುದಾಯಗಳಿಗೂ ಸ್ಥೆ‘ರ್ಯ ಬರುತ್ತದೆ.
- ಅಲೀಂಖಾನ್, ಗ್ರಾಮ ಪಂಚಾಯತ್ ಸದಸ್ಯ, ದೊಡ್ಡವಲಗಮಾದಿ