ತುಮಕೂರು | ಸ್ಮಶಾನ ವಿವಾದ: ರಸ್ತೆಯಲ್ಲಿಯೇ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ
ಸ್ಥಳಕ್ಕೆ ತಹಶೀಲ್ದಾರ್ ಭೇಟಿ
ಪಾವಗಡ (ತುಮಕೂರು) : ತಾಲೂಕಿನ ಕ್ಯಾತಗಾನಹಳ್ಳಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡುವುದಕ್ಕೆ ಅಡ್ಡಿಪಡಿಸಿದ್ದರಿಂದ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯೇ ಅಂತ್ಯಕ್ರಿಯೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. .
ಗ್ರಾಮದ ಈರಣ್ಣ (65) ಅನಾರೋಗ್ಯದಿಂದಾಗಿ ಇತ್ತೀಚೆಗೆ ಮೃತಪಟ್ಟಿದ್ದರು. ಅವರ ಕುಟುಂಬ ಸದಸ್ಯರು ಗ್ರಾಮದ ರಾಜಕಾಲುವೆ ಬಳಿ ಅಂತ್ಯಕ್ರಿಯೆ ನಡೆಸಲು ಮುಂದಾದಾಗ, ರಾಜಕಾಲುವೆಗೆ ಹೊಂದಿಕೊಂಡಿರುವ ಜಮೀನುಗಳ ಮಾಲಕರು ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಲಾಗಿದೆ.
ಆದ್ದರಿಂದ ಮೃತ ಈರಣ್ಣ ಕುಟುಂಬದವರು ದಿಕ್ಕು ತೋಚದೆ ಆಕ್ರೋಶಗೊಂಡು ಜಮೀನುಗಳಿಗೆ ಹೋಗುವ ರಸ್ತೆಯಲ್ಲೇ ಅಂತ್ಯ ಸಂಸ್ಕಾರ ಮಾಡಿದ್ದಾರೆನ್ನಲಾಗಿದೆ.
ತಹಶೀಲ್ದಾರ್ ಭೇಟಿ
ದಲಿತ ಸಂಘಟನೆಯ ಮುಖಂಡರು ಮತ್ತು ಅರಸೀಕೆರೆ ಪೊಲೀಸ್ ಸಿಬ್ಬಂದಿ ಮೂಲಕ ವಿಚಾರ ತಿಳಿದ ತಹಶೀಲ್ದಾರ್ ವರದರಾಜು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.
ತಹಶೀಲ್ದಾರ್ ವರದರಾಜು
ʼಜಮೀನು ಮಾಲಕರಿಗೆ ನೋಟಿಸ್ʼ
ಈ ಜಾಗ ಸರ್ಕಾರಿ ಜಮೀನು ಒತ್ತುವರಿ ಮಾಡಿರುವುದು ಕಂಡು ಬಂದಲ್ಲಿ ಜಮೀನು ಮಾಲಕರಿಗೆ ನೋಟಿಸ್ ಜಾರಿ ಮಾಡಿ ಆದಷ್ಟು ಬೇಗನೆ ತೆರವುಗೊಳಿಸುತ್ತೇವೆ. ದಲಿತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರುದ್ರ ಭೂಮಿ (ಸ್ಮಶಾನದ) ವ್ಯವಸ್ಥೆ ಮಾಡಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿ ಜೆ ಎಸ್ ನಾರಾಯಣಪ್ಪ. ಡಾ ಸುಬ್ಬರಾಯಪ್ಪ ಲಿಂಗದಹಳ್ಳಿ. ನಿವೃತ್ತಿ ಎಎಸ್ಐ ದುರ್ಗೇಶಪ್ಪ ಕ್ಯಾತಗಾನಹಳ್ಳಿ. ಲೋಕೇಶ್. ಸಿ ಕೆ ತಿಪ್ಪೇಸ್ವಾಮಿ ಡಿ ಎಸ್ ಎಸ್ ಸಂಚಾಲಕರು. ಹನುಮಂತರಾಯಪ್ಪ ಹರಿಹರಪುರ. ಕೆಂಚಪ್ಪ . ರಮೇಶ ಟಿ ಎನ್ ಪೇಟೆ. ತಿಮ್ಮರಾಜು . ತಿಪ್ಪೇಸ್ವಾಮಿ. ಊರಿನ ಗ್ರಾಮಸ್ಥರು ಇದ್ದರು.