ಕೆಪಿಸಿಸಿಗೆ ತನ್ವೀರ್ ಸೇಠ್, ಮಂಜುನಾಥ್ ಭಂಡಾರಿ ಸಹಿತ ಐವರು ಕಾರ್ಯಾಧ್ಯಕ್ಷರ ನೇಮಕ
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಿನಯ್ ಕುಮಾರ್ ಸೊರಕೆ ಆಯ್ಕೆ
ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಲ್ಲಿ ಕೆಪಿಸಿಸಿಗೆ ಐವರು ಹೊಸ ಕಾರ್ಯಾಧ್ಯಕ್ಷರನ್ನು ಎಐಸಿಸಿ ನೇಮಿಸಿದೆ.
ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ತನ್ವೀರ್ ಸೇಠ್, ಜಿ.ಸಿ.ಚಂದ್ರಶೇಖರ್, ವಿನಯ್ ಕುಲಕರ್ಣಿ, ಮಂಜುನಾಥ್ ಭಂಡಾರಿ, ವಸಂತ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಅಲ್ಲದೆ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಿನಯ್ ಕುಮಾರ್ ಸೊರಕೆ , ಸಹ ಅಧ್ಯಕ್ಷರಾಗಿ ಎಲ್ ಹನುಮಂತಯ್ಯ, ಉಪಾಧ್ಯಕ್ಷರಾಗಿ ರಿಝ್ವಾನ್ ಅರ್ಶದ್ ಅವರನ್ನು ನೇಮಿಸಿ ಆದೇಶಿಸಿದೆ.
Next Story