ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ: ವಾರ್ಷಿಕ ಪ್ರಶಸ್ತಿಗಳು ಪ್ರಕಟ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ತುಮಕೂರಿನಲ್ಲಿ ಜ.18 ಮತ್ತು 19ರಂದು ನಡೆಯಲಿರುವ 39ನೆ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಅತ್ಯುತ್ತಮ ಗ್ರಾಮಾಂತರ ವರದಿಗೆ ನೀಡುವ ‘ಜಿ.ನಾರಾಯಣಸ್ವಾಮಿ ಪ್ರಶಸ್ತಿ’ಗೆ ವಿಜಯ ಕರ್ನಾಟಕದ ಚಂದ್ರಶೇಖರ ಮುಕ್ಕುಂದಿ ಮತ್ತು ಸಂಯುಕ್ತ ಕರ್ನಾಟಕದ ದಿಗಂಬರ ಮುರುಳೀಧರ ಪೂಜಾರ್ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಮಾನವೀಯ ವರದಿಗೆ ನೀಡುವ ‘ಪಟೇಲ್ ಭೈರಹನುಮಯ್ಯ ಪ್ರಶಸ್ತಿ’ಗೆ ಡೆಕ್ಕನ್ ಹೆರಾಲ್ಡ್ ನ ಪ್ರಸನ್ನ ಮನೋಹರ ಕುಲಕರ್ಣಿ ಮತ್ತು ವಿಜಯ ಕರ್ನಾಟಕದ ರವಿರಾಜ್ ಆರ್ ಗಲಗಲಿ ಭಾಜನರಾಗಿದ್ದಾರೆ. ಅತ್ಯುತ್ತಮ ಅಪರಾಧ ವರದಿಗೆ ನೀಡುವ ‘ಗಿರಿಧರ್ ಪ್ರಶಸ್ತಿ’ಗೆ ವಿಜಯವಾಣಿಯ ಮಂಜುನಾಥ್ ಕೆ. ಮತ್ತು ಶಕೀಲ ಚೌದರಿ, ಅಲ್ಜಪುರ ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ಸ್ಕೂಪ್ ವರದಿಗೆ ನೀಡುವ ‘ಬಿ.ಎಸ್.ವೆಂಕಟರಾಂ ಪ್ರಶಸ್ತಿ’ಗೆ ಪ್ರಜಾವಾಣಿಯನ ಕೆ.ಓಂಕಾರಮೂರ್ತಿ ಮತ್ತು ಸಿದ್ದು ಆರ್‌ಜಿ ಹಳ್ಳಿ ಭಾಜನರಾಗಿದ್ದಾರೆ. ಅತ್ಯುತ್ತಮ ಕ್ರೀಡಾ ವರದಿಗೆ ನೀಡುವ ಕೆ.ಎ.ನೆಟ್ಟಕಲಪ್ಪ ಪ್ರಶಸ್ತಿಗೆ ಶಕ್ತಿ ಪತ್ರಿಕೆಯ ಕಾಯಪಂಡ ಶಶಿ ಸೋಮಯ್ಯ ಮತ್ತು ವಿಜಯವಾಣಿಯ ಪುನೀತ್ ಸಿ.ಟಿ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ರಾಜಕೀಯ ವಿಮರ್ಶಾತ್ಮಕ ವರದಿಗೆ ನೀಡುವ ‘ಖಾದ್ರಿ ಶಾಮಣ್ಣ ಪ್ರಶಸ್ತಿ’ಗೆ ಕನ್ನಡಪ್ರಭದ ಅಪ್ಪಾರಾವ್ ಸೌದಿ ಮತ್ತು ರಮೇಶ್ ದೊಡ್ಡಪುರ ಭಾಜನರಾಗಿದ್ದಾರೆ. ವಾರ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರ ಲೇಖನಕ್ಕೆ ಕೊಡಮಾಡುವ ‘ಮಂಗಳ ಎಂ.ಸಿ. ವರ್ಗಿಸ್ ಪ್ರಶಸ್ತಿ’ಗೆ ಸುಧಾ ಪತ್ರಿಕೆಯ ಕೋಡಿಬೆಟ್ಟು ರಾಜಲಕ್ಷ್ಮಿ, ಮತ್ತು ಮಧುಪ್ರಪಂಚದ ನಾರಾಯಣ ರೈ ಕುಕ್ಕುವಳ್ಳಿ ಆಯ್ಕೆಯಾಗಿದ್ದಾರೆ.
ರೈತಾಪಿ ಜನರ ಸಮಸ್ಯೆ ವರದಿಗಾಗಿ ನೀಡುವ ‘ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ’ಗೆ ಸಂಯುಕ್ತ ಕರ್ನಾಟಕದ ಪುಟ್ಟರಾಜು ಮತ್ತು ವಿಜಯವಾಣಿಯ ಮರಿದೇವರು ಹೂಗಾರ್ ಭಾಜನರಾಗಿದ್ದಾರೆ. ಅರಣ್ಯ ಅತ್ಯುತ್ತಮ ವರದಿಗೆ ನೀಡುವ ‘ಆರ್.ಎಲ್.ವಾಸುದೇವರಾವ್ ಪ್ರಶಸ್ತಿ’ಗೆ ಪ್ರತಿನಿಧಿ ಪತ್ರಿಕೆಯ ಗುರುಪ್ರಸಾದ್ ತುಂಬಸೋಗೆ ಮತ್ತು ಕಾರ್ಕಳ ಹರಿಪ್ರಸಾದ್ ಆಯ್ಕೆಯಾಗಿದ್ದಾರೆ. ವನ್ಯ ಪ್ರಾಣಿಗಳ ಅತ್ಯುತ್ತಮ ವರದಿಗೆ ಕೊಡಮಾಡುವ ‘ಆರ್.ಎಲ್.ವಾಸುದೇವರಾವ್ ಪ್ರಶಸ್ತಿ’ಗೆ ಹೊಸದಿಗಂತದ ರೇಣುಕೇಶ್ ಎಂ. ಮತ್ತು ವಿಜಯವಾಣಯ ಶಿವು ಹುಣಸೂರು ಭಾಜನರಾಗಿದ್ದಾರೆ. ಆರ್ಥಿಕ ದುರ್ಬಲ ವರ್ಗದವರ ಅತ್ಯುತ್ತಮ ವರದಿಗೆ ಕೊಡಮಾಡುವ ‘ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ’ಗೆ ವಿಜಯವಾಣಿಯ ಡಿ.ಎನ್.ತಿಪ್ಪೇಸ್ವಾಮಿ ಮತ್ತು ಆಂದೋಲನದ ನಝೀರ್ ಅಹಮದ್ ಆಯ್ಕೆಯಾಗಿದ್ದಾರೆ.
ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗೆ ನೀಡುವ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ಗೆ ಹೊಸನಗರ ರವಿ ಬಿದನೂರು ಮತ್ತು ಸಂಯುಕ್ತ ಕರ್ನಾಟಕದ ಸಿದ್ಧನಗೌಡ ಎಚ್. ಪಾಟೀಲ್, ಭಾಜನರಾಗಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗೆ ನೀಡುವ ‘ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ’ಗೆ ಉದಯಕಾಲದ ಡಿ.ಬಿ.ಬಸವರಾಜು, ಪ್ರಜಾಟಿವಿಯ ಮುತ್ತುರಾಜ್ ಸೇರಿದಂತೆ ಶಿವಾನಂದ, ಸೂರ್ಯವಂಶ, ಕೆ.ಎಸ್.ನಾಗರಾಜ್, ನಂದೀಶ್ ದುಗಡಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿ ವರದಿಗೆ ಕೊಡಮಾಡುವ ‘ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ’ಗೆ ವಿಜಯ ಕರ್ನಾಟಕದ ಹುಡೇಂ ಕೃಷ್ಣಮೂರ್ತಿ ಮತ್ತು ಉದಯವಾಣಿಯ ವಿಜಯ ಭಾಸ್ಕರರೆಡ್ಡಿ, ಜನಮಿತ್ರದ ಜಯಂತಿ ಯು.ಎಂ. ಅವರು ಭಾಜನರಾಗಿದ್ದಾರೆ. ಅತ್ಯುತ್ತಮ ವಿಡಂಬನಾತ್ಮಕ ಲೇಖನಕ್ಕೆ ಕೊಡಮಾಡುವ ‘ನಾಡಿಗೇರ ಕೃಷ್ಣರಾಯರ ಪ್ರಶಸ್ತಿ’ಗೆ ಪ್ರಜಾವಣಿಯ ಸಿದ್ದಯ್ಯ ಹಿರೇಮಠ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಪುಟವಿನ್ಯಾಸಗಾರ (ಡೆಸ್ಕ್ ನಲ್ಲಿ ಕೆಲಸ ಮಾಡುವವರು) ಪ್ರಶಸ್ತಿಗೆ ಉದಯವಾಣಿಯ ಜನಾರ್ಧನ ಮತ್ತು ವಿಜಯವಾಣಿಯ ವಿಜಯಕುಮಾರ್ ಭಾಜನರಾಗಿದ್ದಾರೆ. ನ್ಯಾಯಾಲಯದ(ಕೋರ್ಟ್ ಬೀಟ್) ಅತ್ಯುತ್ತಮ ವರದಿ ಪ್ರಶಸ್ತಿಯನ್ನು ಪ್ರಜಾವಾಣಿಯ ಷಣ್ಮುಖಪ್ಪ ದಕ್ಕಿಸಿಕೊಂಡಿದ್ದಾರೆ.
ಅತ್ಯುತ್ತಮ ಸೇನಾ ವರದಿಗೆ ಕೊಡುವ ‘ಸುಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ’ಗೆ ವಿಶ್ವಕುಮಾರ್, ಇ.ಆರ್., ಚಿತ್ತಾರ ಆಯ್ಕೆಯಾಗಿದ್ದಾರೆ. ಇಂಗ್ಲಿಷ್ ಪತ್ರಿಕೆ ವರದಿಗೆ ಕೊಡಮಾಡುವ ‘ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ’ಗೆ ಡೆಕನ್ ಹೆರಾಲ್ಡ್ ಪಿ.ಶಿಲ್ಪ ಮತ್ತು ಸ್ಟಾರ್ ಆಫ್‍ನ ಅಕ್ಷಯ ಪಿ.ವಿ. ಆಯ್ಕೆಯಾಗಿದ್ದಾರೆ. ಅತ್ಯುತ್ತಮ ತನಿಖಾ ವರದಿಗೆ ನೀಡುವ ‘ಮಲಗೊಂಡ ಪ್ರಶಸ್ತಿ’ಗೆ ವಿಜಯವಾಣಿಯ ಶರಣ ಬಸವ ನೀರ ಮಾನ್ವಿ ಮತ್ತು ಈ ಸಂಜೆಯ ಪಿ.ರಾಮಸ್ವಾಮಿ ಕಣ್ವ ಭಾಜನರಾಗಿದ್ದಾರೆ.
‘ನಟ, ನಿರ್ದೇಶಕ ದ್ವಾರಕೀಶ್ ಸ್ಮಾರಕ ಪ್ರಶಸ್ತಿಗೆ’ ಕೆ.ಎಸ್.ವಾಸು, ‘ಅಭಿಮಾನಿ ಪ್ರಕಾಶನ ಪ್ರಶಸ್ತಿ’ಗೆ ವಿಜಯ ಕರ್ನಾಟಕದ ರವಿರಾಜ ಗಲಗಲಿ, ಈ ನಗರವಾಣಿಯ ಮಾಲತೇಶ ಅರಸು, ‘ಸುದ್ದಿಚಿತ್ರ ಪ್ರಶಸ್ತಿ’ಗೆ ಪ್ರಜಾವಾಣಿ ಡಿ.ಜೆ.ಮಲ್ಲಿಕಾಜುನ, ಕನ್ನಡಪ್ರಭದ ನಂದನ್ ಪುಟ್ಟಣ್ಣ, ‘ಫೋಟೋಗ್ರಫಿ’ಗೆ ಅತೀಖುರ್ ರೆಹಮಾನ್, ಎಸ್.ಚರಣ್ ಬಿಳಿಗಿರಿ ಆಯ್ಕೆಯಾಗಿದ್ದಾರೆ.
ವಿದ್ಯುನ್ಮಾನ (ಟಿವಿ)ವಿಭಾಗ: ಅತ್ಯುತ್ತಮ ರಾಜಕೀಯ ವಿಶ್ಲೇಷಣೆಗೆ ಸುವರ್ಣ ಟಿವಿ ಅಜಿತ್ ಹನುಮಕ್ಕನವರ್, ‘ಸಾಮಾಜಿಕ, ಮಾನವೀಯ ವರದಿ’ಗೆ ಪಬ್ಲಿಕ್ ಟಿ.ವಿ.ಯ ಕೆ.ಪಿ.ನಾಗರಾಜ್, ಆರ್ ಕನ್ನಡ ವಿಜಯ್ ಜೆ.ಆರ್., ಟಿವಿ 5 ಸತೀಶ್ ಕುಮಾರ್ ಎಂ., ಟಿವಿ 9 ಮಂಜುನಾಥ್ ಕೆ.ಬಿ., ರಾಜ್ ನ್ಯೂಸ್ ರಶ್ಮಿ ಶ್ರೀನಿವಾಸ ಹಳಕಟ್ಟಿ ಭಾಜನರಾಗಿದ್ದಾರೆ.
ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿಗೆ ಮುರುಳೀಧರ್ ಡಿ.ಪಿ., ಪದ್ಮ ನಾಗರಾಜ್, ಮುಮ್ತಾಝ್ ಅಲೀಂ, ಕೆ.ಆರ್.ರೇಣು- ನವದೆಹಲಿ, ವೇಣುಗೋಪಾಲ್- ಕಾಸರಗೋಡು, ರೋನ್ಸ್ ಬಂಟ್ವಾಳ-ಮುಂಬಯಿ, ಶರಣಬಸಪ್ಪ ಜಿಡಗ-ಕಲಬುರ್ಗಿ, ಅಲ್ಲಮಪ್ರಭ ಮಲ್ಲಿಕಾರ್ಜುನ-ವಿಜಯಪುರ, ಮುಹಮದ್ ಯೂನಸ್-ಕೋಲಾರ, ಎಸ್.ಕೆ.ಒಡೆಯರ್-ದಾವಣಗೆರೆ, ಗುರುರಾಜ ಹೂಗಾರ್-ಹುಬ್ಬಳ್ಳಿ ಅವರು ಆಯ್ಕೆಯಾಗಿದ್ದಾರೆ ಎಂದು ಶಿವಾನಂದ ತಗಡೂರು ತಿಳಿಸಿದ್ದಾರೆ.