ವಿಧಾನ ಪರಿಷತ್ ಚುನಾವಣೆ | ಬಿರುಸಿನ ಮತದಾನ
ಬೆಂಗಳೂರು : ರಾಜ್ಯ ವಿಧಾನ ಪರಿಷತ್ತಿನ ಮೂರು ಪದವೀಧರ ಹಾಗೂ ಮೂರು ಶಿಕ್ಷಕರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಬಿರುಸಿನಿಂದ ಮತದಾನ ನಡೆಯುತ್ತಿದೆ.
ಇಂದು ಬೆಳಿಗ್ಗೆ ಗಂಟೆಯಿಂದಲೇ ಮತದಾನ ಅರಂಭವಾಗಿದ್ದು, ಮಧ್ಯಾಹ್ನ 12 ಗಂಟೆ ವರೆಗೆ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಶೇ.26 , ನೈಋತ್ಯ ಪದವೀಧರ ಕ್ಷೇತ್ರ ಶೇ.33.49, ಬೆಂಗಳೂರು ಪದವೀಧರರ ಕ್ಷೇತ್ರ ಶೇ.28.37 , ಆಗ್ನೇಯ ಶಿಕ್ಷಕರ ಕ್ಷೇತ್ರ ಶೇ.28.28, ನೈಋತ್ಯ ಶಿಕ್ಷಕರ ಕ್ಷೇತ್ರ ಶೇ.37.79, ದಕ್ಷಿಣ ಶಿಕ್ಷಕರ ಕ್ಷೇತ್ರ ಶೇ.38.32 ರಷ್ಟು ಮತದಾನವಾಗಿದೆ.
ಚುನಾವಣೆ ನಿಮಿತ್ತ ಶಿಕ್ಷಕರುಗಳಿಗೆ ಸಾಂದರ್ಭಿಕ ರಜೆ ಘೋಷಣೆ ಮಾಡಿದ್ದು, ತಮ್ಮ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಶಿಕ್ಷಕ ಮತದರಾರರು ಬಹಳ ಉತ್ಸುಕತೆಯಿಂದ ಮತ ಚಲಾಯಿಸುತ್ತಿದ್ದಾರೆ.
ಮತದಾನ ಸಂಜೆ 4 ಗಂಟೆ ವರೆಗೆ ನಡೆಯಲಿದ್ದು, ಚುನಾವಣಾಧಿಕಾರಿಗಳು ಮತ್ತು ತಂಡ ಪ್ರತಿ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಗಳನ್ನು ವೀಕ್ಷಿಸುತ್ತಿದ್ದಾರೆ.
Next Story