ನಾಳೆಯಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ: ಸಿದ್ಧತೆ ಪರಿಶೀಲಿಸಿದ ಸಭಾಧ್ಯಕ್ಷರಾದ ಖಾದರ್, ಹೊರಟ್ಟಿ
ಬೆಳಗಾವಿ, ಡಿ.3: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸೋಮವಾರ(ಡಿ.4ರಿಂದ) ಎರಡು ವಾರಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ರವಿವಾರ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿ, ವಿಧಾನಮಂಡಲ ಅಧಿವೇಶನದ ಸಿದ್ಧತೆಗಳನ್ನು ಪರಿಶೀಲಿಸಿದರು.
ವಿಧಾನಸಭೆ ಸಭಾಂಗಣಕ್ಕೆ ಭೇಟಿ ನೀಡಿದ ಖಾದರ್, ಸುಗಮವಾಗಿ ಅಧಿವೇಶನ ನಡೆಸಲು ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
'ಉತ್ತರ ಪ್ರದೇಶ ವಿಧಾನಸಭೆ ಮಾದರಿಯಲ್ಲಿ ಇಲ್ಲಿನ ವಿಧಾನಸಭೆ ಸಭಾಂಗಣದಲ್ಲಿರುವ ಪೀಠೋಪಕರಣಗಳಿಗೂ ಗೋಲ್ಡನ್ ಪೇಂಟ್ ಮಾಡಲು ಸೂಚಿಸಿದ್ದೆ. ಏಕೆ ಅದನ್ನು ಪಾಲಿಸಿಲ್ಲ' ಎಂದು ಪ್ರಶ್ನಿಸಿದರು.
'ಪೀಠದ ಮೇಲೆ ಕುಳಿತು ಸದನ ನಡೆಸುವುದು ನನ್ನ ಜವಾಬ್ದಾರಿ. ಇವೆಲ್ಲ ಕೆಲಸಗಳನ್ನೂ ನಾನೇ ಮಾಡಬೇಕೇ' ಎಂದು ತರಾಟೆಗೆ ತೆಗೆದುಕೊಂಡರು.
ನಂತರ ವಿಧಾನ ಪರಿಷತ್ ಸಭಾಂಗಣಕ್ಕೆ ಉಭಯ ನಾಯಕರು ಭೇಡಿ ನೀಡಿ ಪರಿಶೀಲಿಸಿದರು.
ಅಧಿವೇಶನ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಯು.ಟಿ.ಖಾದರ್ ಮತ್ತು ಬಸವರಾಜ ಹೊರಟ್ಟಿ ಸಭೆ ನಡೆಸಿದರು.