ಸಂಸತ್ ದಾಳಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಲಿ: ಪ್ರಿಯಾಂಕ್ ಖರ್ಗೆ
ಬೆಳಗಾವಿ: ಸಂಸತ್ ದಾಳಿ ಯಾರೇ ಮಾಡಿದರೂ ಖಂಡನೀಯ. ಈ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಈ ಲೋಪಕ್ಕೆ ಜವಾಬ್ದಾರಿ ಯಾರು?ಪ್ರತಾಪ್ ಸಿಂಹ ಇದರ ಬಗ್ಗೆ ಸ್ಪಷ್ಟನೆ ನೀಡಲಿ. ಪಾಸ್ ಕೊಟ್ಟ ಮೈಸೂರು ಸಂಸದರನ್ನು ಯಾಕೆ ಇನ್ನೂ ವಿಚಾರಣೆ ಮಾಡಿಲ್ಲ? ಎಂದು ಪ್ರಶ್ನಿಸಿದರು.
ಇದೇ ಪಾಸ್ ನಮ್ಮವರು ಕೊಟ್ಟಿದ್ದಿದ್ರೆ ಪರಿಸ್ಥಿತಿ ಏನಾಗಿರುತ್ತಿತ್ತು? ದೆಶದ್ರೋಹಿ ಹಣೆಪಟ್ಟಿ ಕಟ್ಟಿ ನಮ್ಮನ್ನು ಕಳಿಸುತ್ತಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಭವಿಷ್ಯ ಅವರಿಗೆಲ್ಲ ಗೊತ್ತಿದೆ. ಲೋಕಸಭಾ ಚುನಾವಣೆಗೆ ಮುನ್ನವೇ ಬಿಜೆಪಿ, ಜೆಡಿಎಸ್ ಖಾಲಿ ಆಗುತ್ತೆ. ಅವರೇ ಪಕ್ಷ ಬಿಟ್ಟು ಬರ್ತಾರೆ ಎಂದರು.
Next Story