ಲೋಕಸಭಾ ಚುನಾವಣೆ : ಸಂಜೆ 5 ಗಂಟೆ ವೇಳೆಗೆ ರಾಜ್ಯದಲ್ಲಿ 63.90 ಶೇ. ಮತದಾನ
Photo : x/@ceo_karnataka
ಬೆಂಗಳೂರು: ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿರುವ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ವೇಳೆ 63.90 ಶೇ. ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 72.13 ಶೇ. ಮತದಾನವಾಗಿದ್ದರೆ, ಹಾಸನ 72.13 ಶೇ., ದಕ್ಷಿಣ ಕನ್ನಡ 71.83 ಶೇ., ಚಿತ್ರದುರ್ಗ-67.00 ಶೇ., ತುಮಕೂರು 72.10ಶೇ., ಮಂಡ್ಯ 74.87 ಶೇ., ಮೈಸೂರು 65.85, ಚಾಮರಾಜನಗರ- 69.60 ಶೇ., ಬೆಂಗಳೂರು ಗ್ರಾಮಾಂತರ-50.4 ಶೇ., ಬೆಂಗಳೂರು ಉತ್ತರ-50.04, ಬೆಂಗಳೂರು ಸೆಂಟ್ರಲ್-48.64 ಶೇ., ಬೆಂಗಳೂರು ದಕ್ಷಿಣ-49.37 ಶೇ., ಚಿಕ್ಕಬಳ್ಳಾಪುರ 70.97 ಶೇ. ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 71.26 ಶೇ. ಮತದಾನವಾಗಿದೆ.
Next Story